ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನ ಆರಂಭವಾಗಿದೆ. ಈ ಬೆನ್ನಲ್ಲೇ ರಾಮಲಲ್ಲಾ ಮೂರ್ತಿಯ ಫೋಟೋ ಇದೀಗ ವೈರಲ್ ಆಗುತ್ತಿದ್ದು, ಅದರ ವಿಶೇಷತೆಗಳ ವಿವರ ನಿಮಗಾಗಿ.
ವೈರಲ್ ಆದ ಫೋಟೋದಲ್ಲಿ ಐದು ವರ್ಷದ ರಾಮನು ಕೈಯಲ್ಲಿ ಬಿಲ್ಲುಹಾಗು ಬಾಣದೊಂದಿಗೆ ಕಾಣಬಹುದಾಗಿದೆ. ಬಲರಾಮನ ಮುಖದಲ್ಲಿ ಮಂದಹಾಸ, ಕೈಯಲ್ಲಿ ಆದಿಶಕ್ತಿ , ಸ್ವಸ್ತಿಕ ಮುದ್ರೆ ಹಾಗು ಮೂರ್ತಿಯ ಮೇಲ್ಬಾಗದಲ್ಲಿ ಸೂರ್ಯದೇವನನ್ನು ಕೆತ್ತನೆ ಮಾಡಲಾಗಿದೆ. ಇನ್ನು ಬಾಲರಾಮನ ಬಲಭಾಗದಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ ಹಾಗು ಎಡಭಾಗದಲ್ಲಿ ಪರಶುರಾಮ, ರಾಮ,ಕೃಷ್ಣ, ಬುದ್ಧ ಹಾಗು ಕಲ್ಕಿ ಅವತಾರಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೇ ಮೂರ್ತಿಯ ಬಲಭಾಗದಲ್ಲಿ ಆಂಜನೇಯ ಹಾಗು ಎಡಭಾಗದಲ್ಲಿ ಗರುಡ ಕೂಡ ಕಾಣಬಹುದು.
ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಗ್ರಹವನ್ನು ತಯಾರಿಸಿದ್ದು, ಮೂರ್ತಿಯ ತೂಕ ಒಟ್ಟು 200 ಕೆಜಿ ಇದೆ ಎನ್ನಲಾಗಿದೆ. ಅಲ್ಲದೇ 4.24 ಅಡಿ ಉದ್ದ ಹಾಗಿ 3 ಅಡಿ ಅಗಲ ಮೂರ್ತಿ ಕೆತ್ತನೆ ಮಾಡಲಾಗಿದೆ.