ಮೈತ್ರಿ ಪಾಳಯದಿಂದ 17 ಮಂದಿ ಶಾಸಕರು ಹೊರಬಂದು ಮೈತ್ರಿ ಸರಕಾರ ಪತನಗೊಂಡಿದ್ದು ಇತಿಹಾಸ…ಅಲ್ಲದೆ ಉಪಚುನಾವಣೆಯಲ್ಲೂ ಆ ಮೈತ್ರಿಯ ಹೊಸ ಅಭ್ಯರ್ಥಿಗಳಿಗೆ ಸೋಲಾಗಿದೆ. ಈಗ ಮತ್ತೊಬ್ಬರು ಜೆಡಿಎಸ್ ಗೆ ರಾಜೀನಾಮೆ ನೀಡಲಿದ್ದಾರೆ! ಆ ನಾಯಕ ತಮ್ಮ ಹಳೆಯ ದೋಸ್ತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪಪ್ಪು ಅಂದಿದ್ದಾರೆ.
ಈಗಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇದೀಗ ಜೆಡಿಎಸ್ಸಿಗೂ ಗುಡ್ ಬೈ ಹೇಳುವ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ಸಿಂದ ಶಾಸಕರಾಗಿ ಬಳಿಕ ೪೦ ದಿನಗಳಲ್ಲಿ ಬಿಜೆಪಿಗೆ ಹಾರಿ, ಅಲ್ಲಿಂದಲೂ ವಿಧಾನಸಭೆಗೆ ಪುನರ್ ಆಯ್ಕೆಯಾಗಿ, ಸಚಿವರಾಗಿದ್ದರು. ೨೦೧೩ರ ವಿಧಾಸಭಾ ಚುನಾವಣೆಯಲ್ಲಿ ಸೋತು, ೨೦೧೮ರಲ್ಲಿ ಜೆಡಿಎಸ್ ಸೇರಿ, ವಿಧಾಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿ, ಆ ಚುನಾವಣೆಯಲ್ಲೂ ಸೋತು, ಪುನಃ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಅಲ್ಲಿಯೂ ಮುಖಭಂಗ ಅನುಭವಿಸಿದ್ದರು. ಈಗ ಜೆಡಿಎಸ್ ಬಿಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ತಮ್ಮ ಕೆಲವು ಬೆಂಬಲಿಗರ ಮಾತಿಗೆ ಕಿವಿಗೊಟ್ಟಿರುವ ಅಸ್ನೋಟಿಕರ್, ತಮ್ಮದೇಯಾದ ಮತ ಬ್ಯಾಂಕ್ ಸೃಷ್ಠಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಪಡೆಯಲು ಯೋಜಿಸಿದ್ದಾರೆ. ಅಲ್ಲದೆ ಬಿಜೆಪಿಯಿಂದ ಮತ್ತೊಂದು ಚಾನ್ಸ್ ಸಿಕ್ಕರೆ ಅತ್ತ ಕೂಡ ವಾಲುವ ಇರಾದೆಯೂ ಅವರಲ್ಲಿದೆ ಎನ್ನಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಕ್ಷಣದ ಉತ್ತರ ಕನ್ನಡಕ್ಕೆ ಬಂದು ಪಕ್ಷ ಬಲಪಡಿಸಿ. ಇಲ್ಲದಿದ್ದ ತಾನು ಪಕ್ಷದಲ್ಲಿರಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸೂಚನೆ ರವಾನಿಸಿದ್ದಾರೆ.
ಉತ್ತರ ಕನ್ನಡಕ್ಕೆ ಬಂದು ಪಕ್ಷ ಕಟ್ಟುವುದು ಗುಡ್ಡಕ್ಕೆ ಮಣ್ಣು ಹೊತ್ತಂತೆ ಎಂಬುದು ಜೆಡಿಎಸ್ ಮೇಲ್ಪಂಕ್ತಿಯ ನಾಯಕರಿಗೆ ಗೊತ್ತಿದ್ದು, ಇದೇ ನೆಪವೊಡ್ಡಿ ಅಸ್ನೋಟಿಕರ್ ಪಕ್ಷ ತೊರೆಯಲಿದ್ದಾರೆಂಬ ಮಾತು ಬೆಂಬಲಿಗರ ವಲಯಲ್ಲಿ ಬಲವಾಗಿ ಕೇಳಿಬರುತ್ತಿದೆ.
ಉಪ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರಕ್ಕೂ ಅಸ್ನೋಟಿಕರ್ ಮನಸ್ಸು ಮಾಡಿರಲಿಲ್ಲ. ಅಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಕ್ಕೆ ಅಸಮಧಾನ ಹೊರಹಾಕಿದ್ದರು. ಅಲ್ಲದೆ ಲೋಕಸಭೆಯಲ್ಲಿ ತಮ್ಮ ಸೋಲಿಗೆ ಸಿದ್ದರಾಮಯ್ಯ ಮತ್ತು ಆರ್ ವಿ ದೇಶಪಾಂಡೆಯೇ ಕಾರಣ ಎಂದು `ಮೈತ್ರಿ’ ನಾಯಕರ ವಿರುದ್ಧ ಅಸ್ನೋಟಿಕರ್ ಸಿಡಿದಿದ್ದನ್ನು ಕೂಡ ಈ ವೇಳೆ ಸ್ಮರಿಸಬಹುದು.

ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದದ್ದು ಯಾಕೆ? : ಯಾವಾಗಲೂ ಕಾಂಗ್ರೆಸ್ಸನ್ನು ಹೊಗಳುತ್ತಿದ್ದ ಆನಂದ ಅಸ್ನೋಟಿಕರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತನ್ನ ಪಪ್ಪು ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅನಗತ್ಯವಾಗಿ ರಾಹುಲ್ ಗಾಂಧಿ ಹೆಸರನ್ನು ಎಳೆದುತಂದಿದ್ದು ಇದು ಬಿಜೆಪಿಯವರನ್ನು ಮೆಚ್ಚಿಸಲೆಂದೇ ಆಡಿದ ಆಟ ಎಂಬುದು ಕಾಂಗ್ರೆಸ್ಸಿಗರ ಸಂಶಯ. ಹೀಗಾಗಿ ಆನಂದ ಕಾಂಗ್ರೆಸ್ಸಿಗೆ ಹೋಗುವ ಮಾತೇ ಇಲ್ಲ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು ಗಾಂಭೀರ್ಯವಿಲ್ಲದ ಉಡಾಫೆ ರಾಜಕಾರಣಿ ಎಂದು ಟೀಕಿಸಿರುವ ಆನಂದ ಅಸ್ನೋಟಿಕರ ದೇಶದಲ್ಲಿ ರಾಹುಲ್ ಗಾಂಧಿಯ ಉಡಾಫೆ ರಾಜಕಾರಣದಿಂದ ೧೮ ರಿಂದ ೩೦ರ ವಯಸ್ಸಿನ ಯುವಕರೆಲ್ಲ ಬಿಜೆಪಿಯ ಕಡೆ ಸರಿದಿದ್ದಾರೆ. ರಾಹುಲವರು ಒಂದು ರೀತಿಯಲ್ಲಿ ಪಪ್ಪು ಇದ್ದಹಾಗೆ. ಇಂಥವರನ್ನು ನಂಬಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳುವ ಮೂಲಕ ತಾನು ಕಾಂಗ್ರೆಸ್ಗೆ ಹೋಗಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.






