ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ: ಸಚಿವ ಜೋಶಿ
ಬೆಂಗಳೂರು: ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರದಿಂದ ಮತ್ತಷ್ಟು ಕೋವಿಡ್ ಕೇಸ್ ಹಾಕುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ.
ರಾಜ್ಯಪಾಲರೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೂ ನೈತಿಕವಾಗಿ ಅವತ್ತೇ ರಾಜೀನಾಮೆ ಕೊಡಬೇಕಿತ್ತು. ರಾಜ್ಯಪಾಲರಿಗೆ, ಸಂವಿಧಾನ ಹುದ್ದೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ಹೇಳಿದ್ದಾರೆ.
ಇನ್ನೂ ಬಾಣಂತಿಯರ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಸಿದ್ದರಾಮಯ್ಯ ರಾಜಕೀಯಕ್ಕೆ ಬರುವಾಗ ಬಳ್ಳಾರಿ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಐವಿ ದ್ರಾವಣ ಸ್ಯಾಂಪಲ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ ಪಕ್ಕದ ರಾಜ್ಯಗಳಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಲಿಲ್ಲ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆಯಲ್ವಾ? ಅಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಿಲ್ಲ ಎಂದು ಜೋಶಿ ಪ್ರಶ್ನೆ ಮಾಡಿದ್ದಾರೆ.