17ನೇ ಲೋಕಸಭಾ ಚುನಾವಣೆ ಮುಗಿದಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಸರ್ಕಾರ ರಚಿಸಲು ಸನ್ನದ್ಧವಾಗಿದೆ. ಮೋದಿ ಪ್ರಧಾನಿಯಾಗಿ ಇನ್ನೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಎನ್ಡಿಎ 353 ಸ್ಥಾನಗಳನ್ನು ಪಡೆದಿದ್ದು ಬಿಜೆಪಿ 303 ಸ್ಥಾನಗಳನ್ನು ಗೆದ್ದು ಐತಿಹಾಸಿಕ ವಿಜಯ ದಾಖಲಿಸಿದೆ. ಯುಪಿಎ ಕೇವಲ 92 ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋಲುಂಡಿದೆ.
ಕಾಂಗ್ರೆಸ್ನ ದಿಗ್ಗಜರೇ ಸೋತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸ್ವ-ಕ್ಷೇತ್ರ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋತು ಮುಖಭಂಗ ಅನುಭವಿಸಿದ್ದಾರೆ. ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿ ಬಹುಮತ ಪಡೆದು ಗೆದ್ದಿರುವುದು ಮಾತ್ರ. ಆದರೆ. ವಯಾನಾಡಿನಲ್ಲಿ ಗೆಲ್ಲದೇ ಇದ್ದಿದ್ದರೆ ರಾಹುಲ್ ಗೆ ಅಮೇಥಿ ಸೋಲು ಅರಗಿಸಿಕೊಳ್ಳಲು ಇನ್ನೂ ಕಷ್ಟವಾಗುತ್ತಿತ್ತು. ಆದರೂ ಸ್ವ-ಕ್ಷೇತ್ರದಲ್ಲಿನ ಸೋಲು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟ.
ಒಟ್ಟಿನಲ್ಲಿ ಕೇವಲ ಅಮೇಥಿಯಲ್ಲಿ ಸೋಲಿನ ನೋವು ಅಲ್ಲದೆ, ಇಡೀ ದೇಶದಲ್ಲಿ ತಮ್ಮ ಪಕ್ಷ ಸೋಲುಂಡಿದ್ದರಿಂದ ರಾಹುಲ್ ನೊಂದಿದ್ದಾರೆ. ಆ ನೋವಿನಿಂದ ತನ್ನ ತಾಯಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿಗೆ ಕರೆ ಮಾಡಿ ನಾನು ಅಧ್ಯಕ್ಷ ಸ್ಥಾನವನ್ನು ತ್ಯಜಿಸುವುದಾಗಿ ಹೇಳಿಕೊಂಡಿದ್ದಾರೆ. ರಾಹುಲ್ ಅಳಲಿಗೆ ಸೋನಿಯಾ ಏನ್ ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.
ರಾಹುಲ್ ಗಾಂಧಿ ರಾಜೀನಾಮೆ ನೀಡಿದರೆ ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಯಾರು ಎನ್ನುವ ಪ್ರಶ್ನೆ ಬರುತ್ತದೆ. ಒಂದು ಲೆಕ್ಕದಲ್ಲಿ ರಾಹುಲ್ ಅವರ ಸೋದರಿ ಪ್ರಿಯಾಂಕ ಗಾಂಧಿ (ಪ್ರಿಯಾಂಕ ವಾದ್ರಾ) ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಿಯಾಂಕ ಇಲ್ಲದೇ ಇದ್ದರೆ ಹಿರಿಯ ಗಾಂಧಿ ವಂಶ ಬಿಟ್ಟು ಬೇರೆ ಅವರಿಗೆ ಅಧ್ಯಕ್ಷ ಗಿರಿ ಕೊಡುವುದಾದರೆ ದಿಗ್ವಿಜಯ ಸಿಂಗ್ ಅವರಿಗೆ ಪಟ್ಟ ಕಟ್ಟಬಹುದು. ಇಲ್ಲವೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೀಡಬಹುದೇ ಎಂಬ ಚರ್ಚೆ ಕೂಡ ಕೇಳಿಬಂದಿದೆ.
ರಾಹುಲ್ ಗಾಂಧಿ ರಾಜೀನಾಮೆ ಕೊಟ್ರೆ ಮುಂದಿನ ಅಧ್ಯಕ್ಷರು ಯಾರಾಗ್ತಾರೆ ಗೊತ್ತಾ?
Date: