ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!
“ರಾಹುಲ್ ದ್ರಾವಿಡ್” ಎಂಬ ಹೆಸರು ಕೇಳುತ್ತಿದ್ದಂತೆ ಇಡೀ ಭಾರತೀಯರಿಗೆ ಹೆಮ್ಮೆ ಅನಿಸುತ್ತದೆ..! ಜಗಮೆಚ್ಚಿದ ಇವರು, ಕನ್ನಡಿಗರೆಂಬುದೇ ನಮಗೆ ಹೆಮ್ಮೆ..! ವಿಶ್ವದ ಶ್ರೇಷ್ಠ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾನ್ ಆಟಗಾರರಿವರು..! ಕ್ರಿಕೆಟ್ ಮೈದಾನದಲ್ಲಿಯೂ, ಮೈದಾನದ ಆಚೆಯೂ ಸಭ್ಯತೆಯ ಇನ್ನೊಂದು ಹೆಸರಾಗಿರುವವರು ನಮ್ಮ ರಾಹುಲ್ ದ್ರಾವಿಡ್..! ಭಾರತೀಯ ಕ್ರಿಕೆಟ್ ತನ್ನಿಂದ ಬಯಸಿದ್ದೆಲ್ಲವನ್ನೂ ದಾರಾಳವಾಗಿ ನೀಡಿದವರು…! ದ್ರಾವಿಡ್ ಕ್ರೀಸ್ ನಲ್ಲಿದ್ದಾರೆಂದರೆ ಎದುರಾಳಿಗಳಲ್ಲಿ ಆತಂಕ..! ಭಾರತದ ಅಭಿಮಾನಿಗಳಲ್ಲಿ ಸೋಲುವ ಪಂದ್ಯವನ್ನೂ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇರ್ತಾ ಇತ್ತು..! ದ್ರಾವಿಡ್ ತಮ್ಮ ಅಭಿಮಾನಿಗಳ ನಂಬಿಕೆಯನ್ನು ಹುಸಿಗೊಳಿಸಿದವರಲ್ಲ..! ಸೋಲುವ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟಿದ್ದಾರೆ..! ಬ್ಯಾಟಿಂಗ್ ಬೆನ್ನೆಲುಬಾಗಿ, ಉತ್ತಮ ಕ್ಷೇತ್ರರಕ್ಷಕರಾಗಿ, ವಿಕೆಟ್ ಕೀಪರ್ ಆಗಿ, ತಂಡದ ನಾಯಕರಾಗಿಯೂ ದೇಶದ ಕ್ರಿಕೆಟ್ ಗೆ ಆಪತ್ಪಾಂಧವರಾಗಿದ್ದರು..! ಈಗ ಕಿರಿಯರ ಗುರುವಾಗಿಯೂ ಭಾರತ ಕ್ರಿಕೆಟಿಗೆ ಕೊಡುಗೆಯನ್ನು ನೀಡ್ತಾ ಇದ್ದಾರೆ..! ದ್ರಾವಿಡ್ ಕೇವಲ ಒಬ್ಬ ಉತ್ತಮ ಕ್ರಿಕೆಟರ್ ಮಾತ್ರವಲ್ಲ.. ಅವರೊಬ್ಬ ಉತ್ತಮ ಗುರು ಎಂಬುದೂ ಸಾಭೀತಾಗಿದೆ..! ಇವರು ಭಾರತ ಕ್ರಿಕೇಟ್ ನ ಕಿರಿಯರ ತಂಡದ ಗುರುವಾದಮೇಲೆ ಇವರ ಶಿಷ್ಯಂದಿರು ಸಾಲು ಸಾಲು ಸರಣಿಗಳನ್ನು ಗೆದ್ದಿದ್ದಾರೆ..!
ದ್ರಾವಿಡ್ ವಿಶ್ವ ಕಂಡ ಅತ್ಯುತ್ತಮ ಕ್ರಿಕೆಟಿಗರು..! ಇವರ ಬಗ್ಗೆ ಎಲ್ಲರಿಗೂ ಗೊತ್ತು..! ಆದರೂ ಅದೆಷ್ಟೋ ವಿಷಯಗಳು ಕೆಲವರಿಗೆ ಗೊತ್ತೇ ಇಲ್ಲ..! ನಮ್ಮ ರಾಹುಲ್ ದ್ರಾವಿಡ್ ಬಗೆಗಿನ ಕುತೂಹಲಕಾರಿ ಹಾಗು ಸಾಮಾನ್ಯವಾಗಿ ಯಾರಿಗೂ ತಿಳಿಯದ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ..!
1.ದ್ರಾವಿಡ್ ರನ್ನು “ಜ್ಯಾಮಿ” ಅಂತಾರೆ..! :
ದ್ರಾವಿಡ್ಗೆ “ಜ್ಯಾಮಿ” ಅಂತ ಕರೀತಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ..! ಆದ್ರೆ ಇವರನ್ನು “ಜ್ಯಾಮಿ” ಅಂತ ಯಾಕೆ ಕರೀತಾರೆ ಗೊತ್ತೇ..? ರಾಹುಲ್ ದ್ರಾವಿಡ್ ರ ತಂದೆ ಕಿಸಾನ್ ಜಾಮ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ರು ಅದಕ್ಕಾಗಿಯೇ ರಾಹುಲ್ ದ್ರಾವಿಡ್ರಿಗೆ “ಜ್ಯಾಮಿ” ಎಂಬ ನಿಕ್ ನೇಮ್ ಇದೆ..! ಅಷ್ಟೇ ಅಲ್ಲದೆ ದ್ರಾವಿಡ್ ಕೂಡ ಕಿಸಾನ್ ಜಾಹಿರಾತುವಿನಲ್ಲಿ ನಟಿಸಿದ್ದರು..! ಜ್ಯಾಮಿ ಅಂದ್ರೆ “ಮಧುರವಾದ” ಎಂಬ ಅರ್ಥ ಬರುತ್ತೆ..ಆ ಹೆಸರಿಗೆ ತಕ್ಕಂತೆಯೇ ದ್ರಾವಿಡ್ ಇದ್ದಾರೆ..!
2 ಸತತ ನಾಲ್ಕು ಟೆಸ್ಟ್ ಶತಕ:
ಸತತ ನಾಲ್ಕೂ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ ಏಕೈಕ ಭಾರತೀಯ ಆಟಗಾರರೆಂದರೆ ರಾಹುಲ್ ದ್ರಾವಿಡ್ ಮಾತ್ರ..! 2002ರಲ್ಲಿ ಇಂಗ್ಲೇಂಡ್ ಪ್ರವಾಸದಲ್ಲಿ ಸತತವಾಗಿ ಮೂರು ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 115, 148, 217ಗಳನ್ನು ಗಳಿಸುವ ಮೂಲಕ ಸತತ 3 ಟೆಸ್ಟ್ ಶತಕಗಳನ್ನು ಬಾರಿಸಿದ್ದರು..! ಆ ಟೂರ್ನಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿಯೂ 100ರನ್ ಗಳಿಸುವ ಮೂಲಕ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶತಕಬಾರಿಸಿದ ಏಕೈಕ ಭಾರತೀಯ ಆಟಗಾರರಾಗಿ ಹೊರಹೊಮ್ಮಿದರು..!
3. ಐಸಿಸಿ ಪ್ರಶಸ್ತಿ ಪಡೆದ ವಿಶ್ವದ ಮೊದಲ ಆಟಗಾರ :
ರಾಹುಲ್ ದ್ರಾವಿಡ್ ಐಸಿಸಿ ನೀಡುವ ವರ್ಷದ ಆಟಗಾರ ಮತ್ತು ವರ್ಷದ ಟೆಸ್ಟ್ ಆಟಗಾರ, ಈ ಎರಡೂ ಪ್ರಶಸ್ತಿಯನ್ನು 2004ರಲ್ಲಿ ಪಡೆದಿದ್ದರು..! ಐಸಿಸಿ ಈ ಪ್ರಶಸ್ತಿಯನ್ನು ಕೊಡಲಾರಂಭಿಸಿದ್ದೇ 2004ರಲ್ಲಿ..! ಆ ವರ್ಷವೇ ದ್ರಾವಿಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು..!
4. ಎಲ್ಲಾ ದೇಶದ ವಿರುದ್ಧವೂ ಶತಕಗಳಿಸಿದ ಆಟಗಾರ:
ಟೆಸ್ಟ್ ಕ್ರಿಕೆಟ್ ಆಡುವ ವಿಶ್ವದ ಎಲ್ಲಾ ತಂಡದ ವಿರುದ್ಧವೂ ಶತಕಗಳಿಸಿದ ವಿಶ್ವದ ಏಕೈಕ ಆಟಗಾರರೆಂದರೆ ನಮ್ಮ ದ್ರಾವಿಡ್ ಮಾತ್ರ..!
5 “ಬ್ರಾಡ್ಮನ್ ಉಪನ್ಯಾಸ”ದಲ್ಲಿ ಉಪನ್ಯಾಸ ಮಾಡಿದ ಏಕೈಕ ಆಸ್ಟ್ರೇಲಿಯೇತರರು:
ಆಸ್ಟ್ರೇಲಿಯಾದ ಕ್ರಿಕೆಟ್ ದಂತೆಕತೆ ಬ್ರಾಡ್ಮನ್ ನೆನಪಿಗಾಗಿ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ನಡೆಸುವ “ಬ್ರಾಡ್ಮನ್ ಉಪನ್ಯಾಸ ಅಥವಾ ಬ್ರಾಡ್ಮನ್ ಓರಿಯಂಟೇಷನ್” ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿದ ಏಕೈಕ ಆಸ್ಟ್ರೇಲಿಯೇತರರೆಂದರೆ ಕನ್ನಡಿಗ ದ್ರಾವಿಡ್ ಮಾತ್ರ..! ಅವರು ಡಿಸೆಂಬರ್ 14, 2012ರಲ್ಲಿ ಉಪನ್ಯಾಸ ನೀಡಿದ್ದರು..!
6. ಏಳನೇ ವಿಶ್ವಕಪ್ ನಲ್ಲಿ ಅತೀಹೆಚ್ಚು ರನ್ ಗಳಿಸಿದವರು :
1999ರಲ್ಲಿ ಇಂಗ್ಲೇಂಡಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 461 ರನ್ ಗಳಿಸುವ ಮೂಲಕ ಟೂನರ್ಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರಾಗಿ ಹೊರಹೊಮ್ಮಿದ್ದರು..! ಆ ಮೂಲಕ ಅವರೊಬ್ಬ ಕೇವಲ ಟೆಸ್ಟ್ ಆಟಗಾರರೆಂದು ಹೇಳುತ್ತಿದ್ದವರಿಗೆ ತಕ್ಕ ಉತ್ತರ ನೀಡಿದ್ದರು..!
7. ತುಂಬಾ ಸೆಕ್ಸಿ ಕ್ರೀಡಾಪಟು :
ನಿಮಗಿದು ಗೊತ್ತಿತ್ತೇ..? 2004-5ರ ಆನ್ ಲೈನ್ ಸರ್ವೆಯಲ್ಲಿ ಭಾರತದ ಅತೀ ಸೆಕ್ಸಿ ಕ್ರೀಡಾಪಟುವಾಗಿ ದ್ರಾವಿಡ್ ಹೊರಹೊಮ್ಮಿದ್ದರು..! ಯುವರಾಜ್ ಸಿಂಗ್, ಸಾನಿಯಾ ಮಿರ್ಜಾರನ್ನೂ ಹಿಂದಿಕ್ಕಿ ದ್ರಾವಿಡ್ ಬಹುಮತ ಪಡೆದಿದ್ದರು..!
8. ಪಾದಾರ್ಪಣಾ ಪಂದ್ಯದಲ್ಲಿಯೇ ನಿವೃತ್ತರಾದ ಏಕೈಕ ಆಟಗಾರ :
ದ್ರಾವಿಡ್ ದಶಕಕ್ಕೂ ಹೆಚ್ಚುಕಾಲ ಭಾರತ ಕ್ರಿಕೇಟ್ ನ ಆಪತ್ಪಾಂಧವರಾಗಿದ್ರು..! ಆದ್ರೆ ಇವರ್ಯಾಕೆ ಪಾದಾರ್ಪಣಾ ಪಂದ್ಯದಲ್ಲಿಯೇ ನಿವೃತ್ತರಾದ ಆಟಗಾರರೆಂದು ಹೇಳ್ತಾ ಇದ್ದಾರೆಂದು ಅಚ್ಚರಿ ಪಡ್ಬೇಡಿ..! ದ್ರಾವಿಡ್ ಟೆಸ್ಟ್ ಆಗು ಏಕದಿನ ಪ್ರಕಾರಗಳಲ್ಲಿ ಅನೇಕ ವರ್ಷಗಳ ಕ್ರಿಕೇಟ್ ಲೋಕವನ್ನು ಆಳಿದ್ದರು…! ಆದರೆ ಅವರು ಟಿ20 ಆಡಿದ್ದು ಒಂದೇ ಒಂದು ಪಂದ್ಯಮಾತ್ರ..! ಅವರು 2011ರ ಆಗಸ್ಟ್ 31ರಂದು ಇಂಗ್ಲೆಂಡ್ ವಿರುದ್ಧ ಟಿ20 ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪಾದಾರ್ಪಣೆ ಮಾಡಿದ್ದರು..! ಅದೇ ಪಂದ್ಯದಲ್ಲಿ ನಿವೃತ್ತಿಯೂ ಆದರು…!
9. ಹಾಕಿ ಆಟಗಾರ ದ್ರಾವಿಡ್ :
ರಾಹುಲ್ ದ್ರಾವಿಡ್ ಕ್ರಿಕೆಟ್ ಗೆ ಬರದೇ ಇದ್ದಿದ್ದರೆ ಅವರನ್ನು ಹಾಕಿ ಆಟಗಾರನ್ನಾಗಿ ನಾವು ನೋಡ್ತಾ ಇದ್ದೆವು..! ಬಾಲ್ಯದಲ್ಲಿ ಹಾಕಿ ಆಟಗಾರರಾಗಿದ್ದ ಅವರು ಕರ್ನಾಟಕದ ಜೂನಿಯರ್ ಹಾಕಿ ತಂಡಕ್ಕೂ ಆಯ್ಕೆಯಾಗಿದ್ದರು..!
10 ದ್ರಾವಿಡ್ ಹೆಸರಲ್ಲೇ ಕ್ರಿಕೆಟ್ ಟೂರ್ನಿ ನಡೆಸಲಾಗುತ್ತೆ :
ದ್ರಾವಿಡ್ ಗೆ ಜ್ಯಾಮಿ ಅಂತ ಕರೆಯುವ ಬಗ್ಗೆ ಮೊದಲೇ ಹೇಳಿದ್ದೇನೆ..! ಅದೇ ಜ್ಯಾಮಿ ಹೆಸರಲ್ಲಿ ಕ್ರಿಕೇಟ್ ಟೂರ್ನಿ ನಡೆಯುತ್ತೆ..! ಬೆಂಗಳೂರಿನಲ್ಲಿ ಶಾಲಾಮಟ್ಟದ ಕ್ರಿಕೆಟ್ ಟೂರ್ನಿಯೊಂದನ್ನು “ಜ್ಯಾಮಿ ಕಪ್” ಎಂಬ ಹೆಸರಲ್ಲಿಯೇ ನಡೆಸಲಾಗುತ್ತಿದೆ..!
11. ಮದ್ವೆ ಆಗ್ತೀನಿ ಅಂದವಳನ್ನು ಓದು ಎಂದಿದ್ದರು :
ಅವತ್ತೊಂದು ದಿನ ದ್ರಾವಿಡ್ ತಿಂಡಿ ತಿನ್ತಾ ಇರ್ತಾರೆ..! ಯಾರೋ ಒಬ್ಬರು ಪತ್ರಕರ್ತ ಅವರ ಕೊಠಡಿಗೆ ಬಂದು..ಮದ್ವೆ ಆಗುವಂತೆ ಒತ್ತಾಯಿಸ್ತಾರೆ..! ಗಲಿಬಿಲಿಯಾದ ದ್ರಾವಿಡ್..! ಹೊರ ಹೋಗಲು ಯತ್ನಿಸ್ತಾರೆ..! ಆಗ ಆಕೆ ಅವರ ತಂದೆಯನ್ನು ಕರೆಯುತ್ತಾರೆ..! ಅವರನ್ನು ಕೂರಿಸಿಕೊಂಡು ಮಾತನಾಡಿದ ದ್ರಾವಿಡ್ ಆ ಹುಡುಗಿಯ ಬಳಿ “ನಿನಗೆ ಎಷ್ಟು ವರ್ಷ”..? ಎಂದು ಪ್ರಶ್ನಿಸುತ್ತಾರೆ..! ಆಗ ಆಕೆ ಇಪ್ಪತ್ತು ವರ್ಷವೆಂದು ಹೇಳ್ತಾರೆ..! ಹ್ಞಾಂ.. ನಿನಗಿನ್ನೂ ಇಪ್ಪತ್ತು ವರ್ಷ ಮೊದಲು ಚೆನ್ನಾಗಿ ಓದೆಂದು ಬುದ್ಧಿ ಹೇಳ್ತಾರೆ..!
ಅಂದಹಾಗೆ ಅದು ರಿಯಲ್ ಆಗಿರಲ್ಲ.. ದ್ರಾವಿಡ್ ಎಂಟಿವಿ ಬಕ್ರ ಆಗಿದ್ರು..! ಆ ವಿಡಿಯೋನಾ ನೀವೇ ನೋಡಿ..!
https://www.youtube.com/watch?v=Uqvpg3vRByA
ದ್ರಾವಿಡ್ ಬಗ್ಗೆ ಈ ವಿಷಯಗಳು ಎಷ್ಟೋ ಜನರಿಗೆ ಗೊತ್ತೇ ಇಲ್ಲ..! ದ್ರಾವಿಡ್ ಬಗ್ಗೆ ತುಂಬಾ ಜನರಿಗೆ ತಿಳಿಯದ ಇನ್ನೂ ಅದೆಷ್ಟೋ ವಿಷಯಗಳಿವೆ ಸಧ್ಯಕ್ಕೆ ಇಷ್ಟು ಸಾಕು..!
ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?
ಬ್ರೇಕಪ್ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!
ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?
ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ..!
ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ .. ಕ್ಯಾನ್ಸರ್ ಲಕ್ಷಣವಿರಬಹುದು ..!
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?
ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?
ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!