ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದ ಕುಡಿ ಇದೀಗ ಚಿತ್ರರಂಗ ಪ್ರವೇಶಿಸಿದೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅದೂ ಸಹ ಅವರ ಚಿಕ್ಕಪ್ಪ ನಟಿಸಿರುವ ಸೂಪರ್ ಸ್ಟಾರ್ ಚಿತ್ರದ ಟೈಟಲ್ ಮೂಲಕವೇ.
ಹೌದು, 2002ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸೂಪರ್ ಸ್ಟಾರ್ ಚಿತ್ರವನ್ನು ನಟಿಸಿ, ನಿರ್ದೇಶಿಸಿದ್ದರು ಇದೀಗ ಅವರ ಸಹೋದರನ ಪುತ್ರ ನಿರಂಜನ್ ಸಹ ಇದೇ ಟೈಟಲ್ ನಲ್ಲಿ ಲಾಂಚ್ ಆಗುತ್ತಿದ್ದಾರೆ.
https://youtu.be/nmZqASs_cO8
ಸದ್ಯ ವಿಭಿನ್ನ ಟೈಟಲ್‌ನ ಮೂಲಕ ಚಂದನವನದಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಂದಹಾಗೆ ಈ ಚಿತ್ರದ ಟೀಸರ್‌ನ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಹಾಗೂ ನಟ ನಿರಂಜನ್‌ಗೆ ವಿಶ್ ಮಾಡಿದ್ದಾರೆ. ನಿರಂಜನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಸೂಪರ್ ಸ್ಟಾರ್ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ.
ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಬಹಾದ್ದೂರ್ ಚೇತನ್ ಕುಮಾರ್, ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್, ಕನ್ನಡದ ರ‍್ಯಾಪರ್ ಅಲೋಕ್, ಚಿತ್ರದ ನಿರ್ಮಾಪಕ ಮೈಲಾರಪ್ಪ ಮುಂತಾದವರು ಭಾಗಿಯಾಗಿದ್ದರು.
ಅಂದಹಾಗೆ ಇದೊಂದು ಡಿಫರೆಂಟ್ ಜಾನರ್‌ನ ಸಿನಿಮಾವಾಗಿದ್ದು, ಈ ಸಿನಿಮಾ ಮೂಲಕ ನಿರಂಜನ್ ಸೂಪರ್ ಸ್ಟಾರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿ ನಿರಂಜನನಿಗೆ ಶುಭಹಾರೈಸಿದರು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ.
ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಸೂಪರ್‌ಸ್ಟಾರ್ ಇನ್ನೇನು ಸದ್ಯದಲ್ಲೇ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದೆ. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ರಮೇಶ್ ವೆಂಕಟೇಶ್ ಬಾಬು. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗ ಹೊರಟಿರುವ ರಮೇಶ್ ವೆಂಕಟೇಶ್ ಟೀಸರ್‌ನಲ್ಲೇ ಭರವಸೆಯನ್ನ ಮೂಡಿಸಿದ್ದಾರೆ. ರಮೇಶ್ ವೆಂಕಟೇಶ್ ಬಾಬು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಅದೇ ರೀತಿ ವಿಧ-ವಿಧವಾಗಿ ತಾಲೀಮು ನಡೆಸಿದ್ದಾರೆ.
ಇನ್ನು ಸೂಪರ್ ಸ್ಟಾರ್ ಟೈಟಲ್ ಇಟ್ಟಾಗಲೇ ಈ ಸಿನಿಮಾದ ಮೇಲೆ ಯಾವ ರೀತಿಯಾದ ನಿರೀಕ್ಷೆಗಳಿರಬಹುದು ಅನ್ನೋದನ್ನ ತಿಳಿದುಕೊಂಡ ನಿರ್ದೇಶಕ ಹಾಗೂ ನಟ ಅದಕ್ಕೆ ಪಕ್ಕಾ ತಯಾರಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಆ ರಿಸಲ್ಟ್ ಈ ಸೂಪರ್ ಸ್ಟಾರ್ ಚಿತ್ರದ ಟೀಸರ್ ನೋಡಿದರೆ ಗೊತ್ತಾಗುತ್ತೆ. ಕಟ್ಟುಮಸ್ತಾದ ದೇಹ, ಸಿನಿಮಾಗಾಗಿ ದೇಹ ಹುರಿಮಾಡಿ, ಬೇವರಿಳಿಸಿ ವರ್ಕೌಟ್ ಮಾಡಿದ ರೀತಿ ಸಿನಿ ಮಂದಿಗೆ ಇಷ್ಟವಾಗದೇ ಇರೋಲ್ಲ. ಇವೆಲ್ಲದರ ಪಕ್ಕಾ ರಿಸಲ್ಟ್ ಈ ಟೀಸರ್‌ನಲ್ಲಿ ಪ್ರೆಸೆಂಟ್ ಆಗಿದೆ. ಇನ್ನು ಈ ಚಿತ್ರದ ಟೀಸರ್‌ಗೆ ರಾಕಿಂಗ್‌ಸ್ಟಾರ್ ಯಶ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ರಾಖಿಬಾಯ್ ಧ್ವನಿ ನೀಡಿರುವುದು ಚಿತ್ರಕ್ಕೆ ಮತ್ತೊಂದು ಮೈಲೇಜ್ ಸಿಕ್ಕಂತಾಗಿದೆ.
ಒಟ್ಟಿನಲ್ಲಿ ಟೀಸರ್ ಮೂಲಕ ಭರವಸೆಯನ್ನ ಮೂಡಿಸಿರುವ ಸೂಪರ್ ಸ್ಟಾರ್ ನಿರಂಜನ್ ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿರುವ ಸೂಪರ್ ಸ್ಟಾರ್ ಚಿತ್ರತಂಡಕ್ಕೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೈಲಾರಿ ಪ್ರೊಡಕ್ಷನ್ ಹಾಗೂ ಆರ್.ವಿ.ಬಿ ಸಿನಿಮಾಸ್ ಬ್ಯಾನರ್ ಲಾಂಛನದಲ್ಲಿ, ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ ಮೈಲಾರಪ್ಪ. ಸದ್ಯದಲ್ಲಿಯೇ ಇನ್ನುಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಕುರಿತ ಮಾಹಿತಿಯನ್ನ ಮುಂದಿನ ದಿನಗಳಲ್ಲಿ ನೀಡಲಿದೆ ಚಿತ್ರತಂಡ.