ಬೆಂಗಳೂರು : ರೇಣುಕಾಸ್ವಾಮಿ ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ಕೊಲೆಗೆ ಬಳಕೆ ಮಾಡಿದ್ದ, ದರ್ಶನ್ʼಗೆ ಸೇರಿದ ಕಾರ್ ಹಾಗೂ ಹಲವು ವಾಹನಗಳನ್ನು ಸೀಜ್ ಮಾಡಿದ್ದಾರೆ. ಈವರೆಗೆ ಕೃತ್ಯಕ್ಕೆ ಬಳಸಿದ್ದ 9 ವೆಹಿಕಲ್ ಗಳು ಸೀಜ್ ಮಾಡಲಾಗಿದ್ದು, ಕೆಲವರು ತಮ್ಮದೇ ವೆಹಿಕಲ್ ಬಳಸಿದ್ರೆ ಮತ್ತೆ ಕೆಲ ಆರೋಪಿಗಳು ಮೂರನೇ ವ್ಯಕ್ತಿಗಳ ವೆಹಿಕಲ್ ಬಳಸಿದ್ದಾರೆ.
ಇದೀಗ ಮೂಲ ಮಾಲೀಕರ ಪತ್ತೆಗೆ ಆರ್ ಟಿ ಒ ಗೆ ಪತ್ರ ಬರೆದಿದ್ದು, ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸ್ರು ತಯಾರಿ ನಡೆಸಿದ್ದಾರೆ. ರಾಜಾಜಿನಗರ, ಯಶವಂತಪುರ, ಕೋರಮಂಗಲ, ಇಂದಿರಾನಗರ ಹಾಗೂ ತುಮಕೂರು ಆರ್ ಟಿಓ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ವಾಹನಗಳ ಮೂಲ ಮಾಲೀಕರು ಯಾರು? ಯಾರ ಹೆಸರಲ್ಲಿ ವಾಹನಗಳು ನೋಂದಣಿಯಾಗಿವೆ ಎಂದು ಮಾಹಿತಿ ನೀಡುವಂತೆ ಅಧಿಕಾರಿಗಳ ಪತ್ರ ಬರೆದಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್: ಕೃತ್ಯಕ್ಕೆ ಬಳಸಿದ್ದ ವಾಹನಗಳ ಮಾಲೀಕರ ಪತ್ತೆಗೆ RTO ಗೆ ಪತ್ರ
Date: