ವಿಜಯಪುರ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚುರುಕಾಗಿ ತನಿಖೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಪ್ಪು ಯಾರು ಮಾಡಿದರೂ ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಅರೋಪಿಯಾಗಿರುವ ನಟ ದರ್ಶನ್ ಬಗ್ಗೆ ಸರ್ಕಾರ ಮೃದು ಧೋರಣೆ ತಳೆದಿಲ್ಲ, ಅದರಲ್ಲೂ ವಿಶೇಷವಾಗಿ ತನ್ನ ವಿರುದ್ಧ ನಟನನ್ನು ಸಮರ್ಥಿಸಿಕೊಂಡಿರುವ ಬಗ್ಗೆ ವರದಿಗಳು ಮಾಧ್ಯಮಗಳಲ್ಲಿ ಕಾಣಿಸಿವೆ,
ಅದರೆ ಅದೆಲ್ಲ ಸತ್ಯಕ್ಕೆ ದೂರ ಎಂದು ಹೇಳಿದರು. ತನ್ನ ಮತ್ತು ದರ್ಶನ್ ನಡುವೆ ಸ್ನೇಹವಿರೋದು ಸತ್ಯ, ಅದರೆ ಇಂಥ ಕೆಲಸಗಳನ್ನು ಮಾಡಿದರೆ ಯಾರಾದರೂ ಜೊತೆಯಾಗಿ ನಿಂತುಕೊಳ್ಳುತ್ತಾರೆಯೇ? ಎಂದು ಹೇಳಿದ ಜಮೀರ್, ತಪ್ಪು ಯಾರು ಮಾಡಿದರೂ ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದರು. ಬೇರೆ ಬೇರೆ ಶಾಸಕರು ವ್ಯಕ್ತಡಿಸಿರುವ ಅಭಿಪ್ರಾಯಗಳಿಗೆ ತಾನು ಬಾಧ್ಯಸ್ಥನಲ್ಲ, ಕಾನೂನಿನ ಚೌಕಟ್ಟಿನೊಳಗೆ ತನಿಖೆ ನಡೆಯುತ್ತಿದೆ ಮತ್ತು ಇವತ್ತು ಅವರನ್ನು ಜೈಲಿಗೂ ಕಳಿಸಲಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ತಪ್ಪು ಯಾರು ಮಾಡಿದರೂ ತಪ್ಪೇ – ಸಚಿವ ಜಮೀರ್
Date: