ಕುಖ್ಯಾತ ರೌಡಿಶೀಟರ್ ಲಕ್ಷ್ಮಣನನ್ನು ಹಾಡಹಗಲೇ ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ರೌಡಿಶೀಟರ್, ಸುಪಾರಿ ಹಂತಕ ರಾಜ ಅಲಿಯಾಸ್ ಕ್ಯಾಟ್ ರಾಜ (31)ನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಕ್ಯಾಟ್ ರಾಜನನ್ನು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಬಂಧಿಸಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು, ಶನಿವಾರ ಬೆಳಗ್ಗೆ ಕೊಲೆಯಾದ ಸ್ಥಳ ಹಾಗೂ ಇಸ್ಕಾನ್ ದೇವಾಲಯ ಸಮೀಪದ ಆರ್.ಜಿ. ಪ್ಯಾಲೆಸ್ ಹೋಟೆಲ್‌ನಲ್ಲಿ ಮಹಜರು ಮಾಡಿದ್ದರು.
ಲಕ್ಷ್ಮಣ ಹಾಗೂ ಆರ್.ಆರ್.ನಗರ ಪೊಲೀಸ್ ಠಾಣೆ ರೌಡಿಶೀಟರ್ ರೂಪೇಶ್ ನಡುವೆ ವಾಗ್ವಾದ ನಡೆದಿತ್ತು. ಇದೇ ವೇಳೆ ಪ್ರಕರಣವೊಂದರಲ್ಲಿ ಕ್ಯಾಟ್ ರಾಜ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಮತ್ತೂಂದೆಡೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ರೂಪೇಶ್ ಕೂಡ ಜೈಲು ಸೇರಿದ್ದ.
ಈ ವಿಚಾರ ತಿಳಿದ ಹೇಮಂತ್, ಜೈಲಿನಲ್ಲಿ ರೂಪೇಶ್‌ನನ್ನು ಭೇಟಿಯಾಗಿ ಲಕ್ಷ್ಮಣನ ಹತ್ಯೆಗೆ ಸಹಕಾರ ನೀಡುವಂತೆ ಕ್ಯಾಟ್ ರಾಜನ ಮನವೊಲಿಸುವಂತೆ ಹೇಳಿದ್ದ. ಅದರಂತೆ ರೂಪೇಶ್, ಕ್ಯಾಟ್ ರಾಜನಿಗೆ ಲಕ್ಷ್ಮಣನ ಹತ್ಯೆಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದ. ಎಂದು ವಿಚಾರಣೆ ಬಳಿಕ ಪೊಲೀಸರಿಗೆ ತಿಳಿದ ಮಾಹಿತಿ .
ರೌಡಿ ಲಕ್ಷ್ಮಣ ಚಲನವಲನಗಳನ್ನು ತಿಳಿದುಕೊಂಡ ನಂತರ ಈ ಸ್ಕೆಚ್ ಗೆ ಪ್ಲಾನ್ ಮಾಡಿದ್ದೇ ಆದರೆ ಒಂದೆರಡು ಕಡೆ ತಪ್ಪಿಸಿಕೊಂಡ .ಆದರೆ ಮೊನ್ನೆ ರಾಜಾಜಿನಗರ ಸಮೀಪದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ಕೊಂದಿದ್ದೆವೆ ಎಂದು ಪೊಲೀಸರಿಗೆ ಹೇಳಿದ್ದಾನೆ