ಲೈಂಗಿಕ ಕಿರುಕುಳ: ನಟಿ ಆಶಿಕಾ ಮಾವನ ಮಗಳು ಆತ್ಮಹತ್ಯೆ

Date:

ಲೈಂಗಿಕ ಕಿರುಕುಳ: ನಟಿ ಆಶಿಕಾ ಮಾವನ ಮಗಳು ಆತ್ಮಹತ್ಯೆ

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸಂಬಂಧಿಯಾಗಿರುವ ಹಾಸನ ಮೂಲದ ಇಂಜಿನಿಯರಿಂಗ್ ಪದವೀಧರೆ ಯುವತಿ, ಪ್ರೀತಿಸಿದ ಯುವಕನಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಘಟನೆ ನವೆಂಬರ್ 21ರಂದು ಬೆಂಗಳೂರಿನ ಪಾಂಡುರಂಗನಗರದಲ್ಲಿ ಸಂಭವಿಸಿದ್ದು, ಪ್ರೀತಿಸಿದ ಯುವಕನ ನಿರಂತರ ಕಿರುಕುಳದಿಂದ ನೊಂದ ಯುವತಿ ಜೀವನಕ್ಕೆ ತೆರೆ ಎಳೆದಿದ್ದಾಳೆ.

ಆ ಯುವಕನು ಮದುವೆಯ ಹೆಸರಿನಲ್ಲಿ ನಂಬಿಕೆ ಹುಟ್ಟಿಸಿ, ನಂತರ ದೈಹಿಕ ಸಂಬಂಧಕ್ಕಾಗಿ ಒತ್ತಡ ಹಾಕಿದ್ದ. ಒಪ್ಪದಿದ್ದಾಗ ಆಗಾಗ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಒತ್ತಡ ಮತ್ತು ಹಲ್ಲೆಯಿಂದ ಮಾನಸಿಕವಾಗಿ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಘಟನೆಯ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಗಳ ಬಂಧನವಾಗದಿರುವುದು ಯುವತಿಯ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಆರೋಪಿಗಳನ್ನು ಕೂಡಲೇ ಬಂಧಿಸಿ, ತಮ್ಮ ಮಗಳಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣವನ್ನು ತನಿಖೆಗೈಯುತ್ತಿದ್ದು, ಬೇಗನೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50% ಮುಚ್ಚುವ ಭೀತಿ

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50%...

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು ಮಾತನಾಡಲಿ – ಡಿಕೆ ಶಿವಕುಮಾರ್

ಅಂತರರಾಷ್ಟ್ರೀಯ ಮಹಿಳಾ ದಿನವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ: ಬಿಜೆಪಿ ಸಂಸದರು...

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಸಾಲಬಾಧೆ: ಶಾಸಕ ಬಸವರಾಜ್ ಶಿವಗಂಗಾ PA ಲಾಡ್ಜ್ʼನಲ್ಲಿ ನೇಣು ಬಿಗಿದು ಆತ್ಮಹತ್ಯೆ ಬೆಂಗಳೂರು:...

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್ ನವದೆಹಲಿ: ಕರೂರಿನಲ್ಲಿ...