No menu items!
15.2 C
Munich
Wednesday, April 29, 2026

ಹಾಸ್ಯ ನಟ ಉಮೇಶ್ ರವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

Must read

ಹಾಸ್ಯ ನಟ ಉಮೇಶ್ ರವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಬೆಂಗಳೂರು: ಸುಮಾರು 900 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ಹಾಸ್ಯ ನಟರಾಗಿದ್ದ ಉಮೇಶ್ ರವರ ನಿಧನದಿಂದ ದು:ಖ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು. ಅವರು ಇಂದು ಚಲನಚಿತ್ರ ನಟ ಉಮೇಶ್ ರವರ ಪಾರ್ಥೀವ ಶರೀರವನ್ನು ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ ರವರ ನಿಧನರಾಗಿದ್ದಾರೆ. ಮೈಸೂರಿನವರಾದ ಉಮೇಶ್ ರವರು ತಮ್ಮ ಕಿರಿಯ ವಯಸ್ಸಿನಲ್ಲಿಯೇ ರಂಗಭೂಮಿಯ ನಟರಾಗಿ, ನಂತರ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 900 ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಉಮೇಶ್ ರವರು ಹಾಸ್ಯನಟರಾಗಿ ಖ್ಯಾತರಾಗಿದ್ದರು. 80 ವರ್ಷ ವಯಸ್ಸಿನ ಉಮೇಶ್ ರವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು, ಅವರ ಕೋರಿಕೆ ಮೇರೆಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗಿತ್ತು ಎಂದರು.

- Advertisement -spot_img

More articles

- Advertisement -spot_img

Latest article