10ನೇ ಕ್ಲಾಸ್ ಗೆ ವಿದ್ಯಾಭ್ಯಾಸ ಸ್ಟಾಪ್, ಗಿರಣಿಯಲ್ಲಿ ಕೆಲಸ ; ಗಂಡನ‌ ಕೆಲಸ ಕೂಲಿ ….ಈಗ ?

Date:

 

ಮಂಜುಳಾ ವಘೇಲಾ ಅವರು ಬರೀ 10ನೇ ತರಗತಿಯವರೆಗೆ ಮಾತ್ರ ಓದಿದ್ದರೂ ಅಹಮದಾಬಾದ್ ನಗರದ ನೂರಾರು ಮಹಿಳೆಯರ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಬೀದಿಗಳಲ್ಲಿ ಕಸ ಗುಡಿಸಿ ದಿನಕ್ಕೆ 5 ರೂಪಾಯಿ ಸಂಪಾದಿಸುತ್ತಿದ್ದ ಮಂಜುಳಾ ಈಗ 60 ಲಕ್ಷ ರೂಪಾಯಿ ವಹಿವಾಟು ನಡೆಸುವ “ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಲಿ ಲಿಮಿಟೆಡ್” ನ ಮುಖ್ಯಸ್ಥೆಯಾಗಿದ್ದಾರೆ.
ಆರು ಮಂದಿ ಒಡಹುಟ್ಟಿದವರನ್ನು ಹೊಂದಿದ್ದ ಮಂಜುಳಾ ತಂದೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಮಂಜುಳಾ 10ನೇ ತರಗತಿಯ ನಂತರ ಓದನ್ನು ಬಿಡಬೇಕಾಯಿತು. ಕೂಲಿ ಮಾಡುತ್ತಿದ್ದ ವ್ಯಕ್ತಿಯ ಜೊತೆ ಮಂಜುಳಾ ಮುಂದಿನ ಬಾಳು ಶುರುಮಾಡಿದರು. ಗಂಡನ ಹಣ ಮನೆ ಸಂಭಾಳಿಸಲು ಸಾಕಾಗುತ್ತಿರಲಿಲ್ಲ. ಹಾಗಾಗಿ ತಾನೂ ಮನೆಯಿಂದ ಹೊರಬಂದು ನಾಲ್ಕು ಕಾಸು ಸಂಪಾದಿಸುವ ನಿರ್ಧಾರಕ್ಕೆ ಬಂದರು.
ದಿನವಿಡಿ ಬೀದಿ ಬೀದಿ ಕಸಗುಡಿಸಿದರೂ ಮಂಜುಳಾ ಕೈಗೆ ಸಿಗ್ತಾ ಇದ್ದದ್ದು ಬರೀ ಐದು ರೂಪಾಯಿ. ಯಾರದೋ ಸಲಹೆ ಮೇರೆಗೆ ಮಂಜುಳಾ ಇಲ್ಲಾಬೆನ್ ಭಟ್ ಸ್ವಯಂ ಸೇವಾ ಮಹಿಳಾ ಅಸೋಸಿಯೇಷನ್ ಸದಸ್ಯರಾದರು. ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುವ ಈ ಸಂಸ್ಥೆಯಲ್ಲಿ ಮಹಿಳೆಯರ ಸಾಮರ್ಥ್ಯಕ್ಕೆ ತಕ್ಕಂತೆ ಅನೇಕ ಮಂಡಳಿಗಳಿದ್ದವು. 1981ರಲ್ಲಿ ಆರಂಭವಾದ ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಳಿ ಲಿಮಿಟೆಡ್ ನಲ್ಲಿ ಮಂಜುಳಾಗೆ ಸದಸ್ಯತ್ವ ನೀಡಲಾಯ್ತು. ಈ ಮಂಡಳಿ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳ ಸ್ವಚ್ಛತಾ ಕಾರ್ಯ ನಿಭಾಯಿಸುತ್ತಿತ್ತು.
ಮಂಜುಳಾ ಪ್ರಕಾರ ಅವರು ಮೊದಲ ಬಾರಿ ಕಸ ಗುಡಿಸಿ ಶುದ್ಧ ಮಾಡಿದ ಸ್ಥಳ ಅಹಮದಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಕೇಂದ್ರ. ಪ್ರತಿದಿನ ಅಲ್ಲಿ ಮೂರು ತಾಸು ಕೆಲಸ ಮಾಡಬೇಕಿತ್ತು. ಪ್ರತಿ ತಿಂಗಳು 75 ರೂಪಾಯಿ ಸಿಗುತ್ತಿತ್ತು. ಸ್ವಲ್ಪ ಸಮಯದ ನಂತರ ಮಂಜುಳಾ ಅವರಿಗೆ ಬೇರೆ ಕಡೆ ಕೆಲಸ ಮಾಡಲು ಸೂಚಿಸಲಾಗಿತ್ತು. ನಂತರ ಅವರಿಗೆ ಮೇಲ್ವಿಚಾರಕರಾಗಿ ಬಡ್ತಿ ಸಿಕ್ಕಿತ್ತು. ಕೆಲ ವರ್ಷಗಳ ಬಳಿಕ ಮಂಡಳಿಯ ಕಾರ್ಯದರ್ಶಿಯಾದರು.
ಆಗ ಮಂಜುಳಾ ಅವರು ಮಂಡಳಿಯ ಕೆಲಸದ ಜೊತೆಗೆ ಕಚೇರಿಯ ಇತರ ಕೆಲಸಗಳನ್ನು ಮಾಡುತ್ತಿದ್ದರು. ಇತರ ಮಹಿಳೆಯರನ್ನೂ ತಮ್ಮ ಜೊತೆ ಸೇರಿಸಿಕೊಳ್ಳುವ ಕಾರ್ಯ ಶುರುಮಾಡಿದರು. 31 ಮಹಿಳೆಯರಿಂದ ಆರಂಭವಾದ ಮಂಡಳಿ ಈಗ 400 ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿದೆ.


ಮಂಜುಳಾ ಅವರ ಅಚ್ಚುಕಟ್ಟಿನ ಕೆಲಸ ನೋಡಿದ ಮಂಡಳಿ 15 ವರ್ಷಗಳ ಹಿಂದೆ ಅವರನ್ನು ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು. ಬಡ ಮಹಿಳೆಯರು ನೆಮ್ಮದಿಯಿಂದ ಹೊಟ್ಟೆತುಂಬ ಊಟ ಮಾಡಬೇಕೆಂದು ಬಯಸುವ ಮಂಜುಳಾ ಆದಷ್ಟು ಬಡ ಮಹಿಳೆಯರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಂಜುಳಾ ಅವರ ಮೇಲ್ವಿಚಾರಣೆಯಲ್ಲಿ ಈ ಸಂಘಟನೆ ಅಹಮದಾಬಾದ್ ನ 45 ಸ್ಥಳಗಳಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದೆ. ಸರ್ಕಾರಿ ಕಟ್ಟಡ, ಖಾಸಗಿ ಕಟ್ಟಡ, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಶಾಲೆಗಳು ಇದರಲ್ಲಿ ಸೇರಿವೆ. ಗುತ್ತಿಗೆ ಪಡೆಯಲು ಟೆಂಡರ್ ಸಿದ್ಧಪಡಿಸುವುದರಿಂದ ಹಿಡಿದು ಎಲ್ಲ ಕೆಲಸವನ್ನು ಮಂಜುಳಾ ತಾವೇ ಮಾಡುತ್ತಾರೆ.
ಇನ್ನು ಸೌಂದರ್ಯ ಸಫಾಯಿ ಲಿಮಿಟೆಡ್ನ ಇಂದಿನ ವಹಿವಾಟು 60 ಲಕ್ಷ ರೂಪಾಯಿ. ಮುಂದಿನ ವರ್ಷ 1 ಕೋಟಿ ತಲುಪುವ ಗುರಿ ಮಂಜುಳಾ ಅವರದ್ದು. ಅಹಮದಾಬಾದ್ ನಲ್ಲಿ ಮಾತ್ರ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಗುಜರಾತ್ ನ ಇತರೆಡೆ ಕೆಲಸ ಮಾಡುವ ಪ್ರಯತ್ನದಲ್ಲಿದೆ ಮಂಡಳಿ. ಅಹಮದಾಬಾದ್ ನಂತರ ಸೂರತ್ ಹಾಗೂ ಬರೋಡಾದಲ್ಲಿ ಕೆಲಸ ಮಾಡುವ ಯೋಜನೆ ಇದೆ.


ಒಟ್ಟಾರೆ, ಸೌಂದರ್ಯ ಸಫಾಯಿ, ಸಂಘಟನೆಯಲ್ಲಿ 30ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಕೆಲಸ ಮಾಡುತ್ತಿದ್ದು, ಎಲ್ಲರೂ ಮಂಡಳಿಯಿಂದ ಅಭಿವೃದ್ಧಿಯಾಗಿದ್ದಾರೆ. ಮಂಡಳಿಯೂ ಕೂಡ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಈ ಇತರೆ ಸಂಘಟನೆಗಳಿಗೆ ನಿದರ್ಶನವಾಗಿದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...