ವಸತಿ ಇಲಾಖೆಯಲ್ಲಿ ಗೋಲ್ಮಾಲ್: ಮಿನಿಸ್ಟರ್ ರಾಜೀನಾಮೆ ನೀಡಲಿ – ಬೇಳೂರು ಗೋಪಾಲಕೃಷ್ಣ!
ಶಿವಮೊಗ್ಗ : ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇಲಾಖಾ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿನ ಸಮಸ್ಯೆ ಕುರಿತು ಹಿರಿಯ ಸದಸ್ಯರೊಬ್ಬರು ಆಪಾದನೆ ಮಾಡಿದ್ದಾರೆ. ಈ ಹಿನ್ನೆಲೆ ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿ, ತನಿಖೆ ಎದುರಿಸುವುದು ಸೂಕ್ತ ಎಂದರು. ಈ ಹಿಂದೆ ಹಲವು ಹಗರಣಗಳಾದಾಗ ಸಚಿವರುಗಳು ರಾಜೀನಾಮೆ ನೀಡಿದ್ದರು. ಅಂತೆಯೇ ಅಪಾದನೆ ಕೇಳಿ ಬಂದಿರುವುದರಿಂದ ಸಚಿವರು ರಾಜೀನಾಮೆ ನೀಡಬೇಕು. ತನಿಖೆ ಬಳಿಕ ಪುನಃ ಸಚಿವರಾಗುವುದು ಸೂಕ್ತ ಎಂದರು.
ಈ ಆರೋಪದಿಂದ ಸರ್ಕಾರ ಮುಜುಗರಕ್ಕೀಡಾಗಿದೆ. ಹೀಗಾಗಿ ಸಚಿವರು ರಾಜೀನಾಮೆ ಕೊಡೋದು ಸೂಕ್ತ ಎಂದಿದ್ದಾರೆ.