ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ
ಬೆಳಗಾವಿ: ಮೀನುಗಾರರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ, ವಿದ್ಯಾನಿಧಿ ಯೋಜನೆ, ಗುಂಪು ವಿಮಾ ಯೋಜನೆ ಜಾರಿ ಸೇರಿದಂತೆ ರಾಜ್ಯ ಸರ್ಕಾರವು ವಸತಿ ರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಇದುವರೆಗೆ 10,000 ಮನೆಗಳನ್ನು ನೀಡಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ತಿಳಿಸಿದರು.
ಪರಿಷತ್ತಿನಲ್ಲಿ ಡಿ.17ರಂದು ಪ್ರಶ್ನೋತ್ತರ ವೇಳೆ, ಸದಸ್ಯರಾದ ಎಂ.ನಾಗರಾಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಸಮುದ್ರದಲ್ಲಿ ಮೀನುಮರಿಗಳ ಬಿತ್ತನೆ ಕಾರ್ಯಕ್ರಮವನ್ನು ಅನುಷ್ಟಾ ನಗೊಳಿಸಲಾಗುತ್ತಿದ್ದು, ಇದಕ್ಕಾಗಿ 2025-26ನೇ ಸಾಲಿನಲ್ಲಿ 50.00 ಲಕ್ಷ ಅನುದಾನ ರೂ. ಒದಗಿಸಲಾಗಿದೆ. ಈ ಕಾರ್ಯಕ್ರಮದಡಿ 2024-25ನೆ ಸಾಲಿನಲ್ಲಿ ರೂ.55 ಲಕ್ಷ ರೂ ವೆಚ್ಚದಲ್ಲಿ 1.53 ಲಕ್ಷ ಸೀಬಾಸ್ ತಳಿಯ ಮೀನುಮರಿಗಳನ್ನು ಕರಾವಳಿಯ ಅಳಿವೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮೀನುಗಾರಿಕೆ ಇಲಾಖೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು ಒಟ್ಟು 14,998 ಮೀನುಗಾರರು ಪಡೆದಿರುತ್ತಾರೆ. ಮೀನುಗಾರರ ಸಮುದಾಯದ ಕಲ್ಯಾಣವನ್ನು ಕಾಪಾಡಲು ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ರೂ.3.00 ಲಕ್ಷಗಳ ವರೆಗೆ ಸಾಲ ಸೌಲಭ್ಯ, ಆಕಸ್ಮಿಕ ಅವಘಡದಿಂದ ಮೃತಪಟ್ಟ ಮೀನುಗಾರರ ವಾರಸುದಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ವಿತರಣೆ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ,
ಮೀನುಗಾರರ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ಮೀನುಗಾರಿಕೆ ನಿμÉೀಧದ ಅವಧಿಯಲ್ಲಿ ಪರಿಹಾರ ವಿತರಣೆ, ಮೀನುಗಾರರಿಗೆ ಗುಂಪು ವಿಮಾ ಯೋಜನೆ, ವಸತಿ ಸೌಕರ್ಯ, ಸಾಂಪ್ರದಾಯಿಕ ಮೀನುಗಾರರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಕೃತಕ ಬಂಡೆಗಳ ಸ್ಥಾಪನೆ (Artificial reef) ಹಾಗೂ ಸಮುದ್ರದಲ್ಲಿ ಮೀನುಮರಿ ಬಿತ್ತನೆ ಕಾರ್ಯಕ್ರಮ (Sea ranching) ಯೋಜನೆಗಳು ಜಾರಿಯಲ್ಲಿವೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.






