ವಾರಕ್ಕೆ ಎಷ್ಟು ಬಾರಿ ಸೆಕ್ಸ್ ಮಾಡ್ಬೇಕು? ಇಷ್ಟೂ ಮಾಡ್ದೇ ಇದ್ರೆ ಹೇಗೆ?

Date:

ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಲು ನಮ್ಮ ಭಾರತದಲ್ಲಿ ಮಡಿವಂತಿಕೆ ಇಂದಿಗೂ ಜಾಸ್ತಿಯಾಗಿಯೇ ಇದೆ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ. ಮಡಿವಂತಿಕೆ ಬದಿಗಿಟ್ಟು ಲೈಂಗಿಕ ಆರೋಗ್ಯದ ಬಗ್ಗೆ ಅಗಾಧ ಜ್ಞಾನ ಸಂಪಾದಿಸುವುದು ಬಹು ಮುಖ್ಯ. ಈ ಲೈಂಗಿಕತೆ ಬಗ್ಗೆ ಅಷ್ಟೊಂದು ಮಡಿವಂತಿಕೆ ಒಳ್ಳೆಯದಲ್ಲ..!
‘ಸೆಕ್ಸ್‌ನಲ್ಲಿ ಸಕ್ರಿಯವಾಗಿ, ನಿಯಮಿತವಾಗಿ, ಒಳ್ಳೆ ಮನಸ್ಸಿನಿಂದ ಭಾಗಿಯಾದರೆ ಹೃದ್ರೋಗವೇ ಬರುವುದಿಲ್ಲ,’ ಎಂದು ಸಂಶೋಧನೆಯೊಂದು ದೃಢಪಡಿಸಿದೆ ಈ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಸೆಕ್ಸ್ ವಿಷಯದಲ್ಲಿ ಮುಕ್ತವಾಗಿರಬೇಕು. ಈಗಿನ ಒತ್ತಡದ ಬದುಕಿನಲ್ಲಿ ಖಿನ್ನತೆ ಎಲ್ಲರನ್ನೂ ಕಾಡುತ್ತದೆ. ಆದರೆ, ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾರ್ಮೋನ್‌ಗಳು ಸೂಕ್ತ ಪ್ರಮಾಣದಲ್ಲಿ ಉತ್ಪತ್ತಿಯಾಗಿ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಮಡಿವಂತಿಕೆ ಬಿಟ್ಟು ಜಾಗೃತಾರಗಿರಬೇಕು. ಗೊತ್ತಿಲ್ಲದ ವಿಷಯಗಳನ್ನು ಅರಿತುಕೊಳ್ಳಬೇಕು.


ಸದಾ ಕೆಲಸ ಮಾಡುವವರಿಗೆ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲಾಗದಷ್ಟು ಬಿಡುವಿರುವುದಿಲ್ಲ ಇದರಿಂದ ಹೆಚ್ಚಾಗಿ ಜಗಳ ಮತ್ತು ಮನಸ್ತಾಪ ಉಂಟಾಗುತ್ತದೆ. ಸಂಶೋಧನೆಯ ಪ್ರಕಾರ ಸುಖವಾದ ಜೀವನ ನಡೆಸುತ್ತಿರುವ ದಂಪತಿ ವರ್ಷಕ್ಕೆ 54 ಸಲವಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾರಂತೆ!
ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ವಾರಕ್ಕೊಂದು ಸಲ ಸೆಕ್ಸ್ ಮಾಡುವುದರಿಂದ ನೆಮ್ಮದಿ ಮತ್ತು ತೃಪ್ತಿ ಇರುತ್ತದೆ. ಆದರೆ ವಾರಕ್ಕೆ ಒಂದಕ್ಕಿಂತ ಹೆಚ್ಚಿಗೆ ಲೈಂಗಿಕ ಕ್ರಿಯೆ ನಡೆಸಿದರೂ ಆಯಾಸ ಕಾಡಬಹುದು. ಆದರೆ, ಲೈಂಗಿಕ ಕ್ರಿಯೆಗೆ ಸಮಾನವಾದಿ ಇತರೆ ಚಟುವಟಿಕೆಗಳಲ್ಲಿ ದಂಪತಿ ಭಾಗಿಯಾಗುವುದು ಅತ್ಯುತ್ತಮವೆಂದು ಈ ಸಂಶೋಧನೆಯಿಂದ ಸಾಬೀತಾಗಿದೆ. ಆದರೆ, ದಾಂಪತ್ಯದಲ್ಲಿ ಹೊಂದಾಣಿಕೆ, ಪ್ರೀತಿ ಹೆಚ್ಚಲು ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಅಗತ್ಯವಿದೆ ಎನ್ನುವುದನ್ನು ಮಾತ್ರ ಈ ಸಂಶೋಧನೆ ಸ್ಪಷ್ಟಪಡಿಸಿದೆ.


ಒಟ್ಟಿನಲ್ಲಿ ಸೆಕ್ಸ್ ಅಂದ್ರೆ ಅಸಹ್ಯ ಬೇಡ. ಸಂಗಾತಿಯೊಂದಿಗಿನ ಉತ್ತಮ ಸುಮಧುರ ಬದುಕಿಗೆ ಲೈಂಗಿಕ ಕ್ರಿಯೆ ಕೂಡ ಬಹು ಮುಖ್ಯ. ವಾರಕ್ಕೆ ಒಂದು ಬಾರಿ ಸೆಕ್ಸ್ ಒಳ್ಳೆಯದು. ಒಳ್ಳೆಯದು ಅಂತ ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸೆಕ್ಸ್ ಮಾಡಿದ್ರೆ ಆಯಾಸ ಅನಿಸಲೂ ಬಹುದು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...