ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬಿಡುಗಡೆಯಾದಾಗಿನಿಂದ ಬಹಳಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಕರ್ನಾಟಕದ ತುಪ್ಪ ಈ ವಿಡಿಯೋ ಬಗ್ಗೆ ಮಾತುಕತೆಗಳು ಹರಿದಾಡುತ್ತಿದೆ. ಇನ್ನು ಈ ವಿಡಿಯೋ ಕುರಿತು ರಾಜಕೀಯ ಮಂದಿ ಹಲವಾರು ರೀತಿಯಲ್ಲಿ ಈಗಾಗಲೇ ಮಾತನಾಡಿದ್ದಾರೆ.
ಇದೀಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ವಿಡಿಯೋ ಕುರಿತು ಮಾತನಾಡಿದ್ದು ವಿಡಿಯೋದಲ್ಲಿರುವ ಆ ಯುವತಿಯನ್ನು ಕೆಣಕಿದ್ದಾರೆ. ಹೌದು ವಿಡಿಯೋದಲ್ಲಿರುವ ಆ ಯುವತಿಯನ್ನು ಎಲ್ಲರೂ ಸಂತ್ರಸ್ತೆ ಅಂತ ಕರೆಯುತ್ತಿದ್ದೀರಾ ವಿಡಿಯೋ ಇಷ್ಟೊಂದು ವೈರಲ್ ಆದರೂ ಸಹ ಆ ಯುವತಿ ಯಾಕೆ ಮುಂದೆ ಬಂದಿಲ್ಲ? ಎಂದು ಬಸವರಾಜ ಬೊಮ್ಮಾಯಿ ಅವರು ಪ್ರಶ್ನೆ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಇದನ್ನೆಲ್ಲಾ ಗಮನಿಸಿದರೆ ಇದೊಂದು ಹೆಣೆಯಲಾದ ಷಡ್ಯಂತ್ರ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು. ತನಗೆ ಅನ್ಯಾಯವಾದರೆ ಯಾವುದೇ ಯುವತಿ ಯಾದರೂ ಕೇಸ್ ಹಾಕುತ್ತಾಳೆ ಆದರೆ ಈಕೆ ಮಾತ್ರ ಯಾವುದೇ ಕೇಸ್ ಕೂಡ ಹಾಕದೆ ಕಣ್ಮರೆಯಾಗಿರುವುದು ನಿಜಕ್ಕೂ ಸಂಶಯ ಮೂಡಿಸುವಂತದ್ದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.






