ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ಸೋಲನುಭವಿಸಿದೆ. ಲೀಗ್ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತ್ತು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ! ಸೆಮಿಫೈನಲ್ನಲ್ಲಿಗೆ ಮಳೆ ಅಡ್ಡಿಯಾಗಿದ್ದರಿಂದ ಲೀಗ್ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ನಡೀಲಿಲ್ಲ. ಲೀಗ್ ಅಂಕಪಟ್ಟಿ ಆಧಾರದಲ್ಲಿ ನೇರವಾಗಿ ಭಾರತ ಫೈನಲ್ ಪ್ರವೇಶಿಸಿತ್ತು. ಫೈನಲ್ನಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಭಾರತ ಸೆಣೆಸಿತ್ತು. ಮೊದಲ ಲೀಗ್ ಪಂದ್ಯದಲ್ಲಿ ಆಸೀಸನ್ನು ಸೋಲಿಸಿದ್ದ ಭಾರತ ಫೈನಲ್ನಲ್ಲಿ ಮುಗ್ಗರಿಸಿತು. ಇದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶ ತಪ್ಪಿಸಿಕೊಂಡಿತು.
ಭಾರತ ತಂಡ ವಿಶ್ವಕಪ್ ಸೋತರೇನಂತೆ ನಮ್ಮ ಹೆಮ್ಮೆಯ ಸಹೋದರಿಯರು ನಮ್ಮೆಲ್ಲರ ಮನಗೆದ್ದಿದ್ದಾರೆ. ಅವರ ಹೋರಾಟ, ಕ್ರೀಡಾಸ್ಫೂರ್ತಿ ಮಾದರಿ. ಮುಂದೆ ಸಾಲು ಸಾಲು ಟ್ರೋಫಿಗಳಿಗೆ ಮುತ್ತಿಕ್ಕುತ್ತಾರೆ ಅನ್ನೋದರಲ್ಲಿ ಅನುಮಾನವಿಲ್ಲ.
ಅದೇನೇ ಇರಲಿ ಮಹಿಳಾ ವಿಶ್ವಕಪ್ ಇತಿಹಾಸವನ್ನು ನೋಡುವುದಾದರೆ.. 1973ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆರಂಭವಾಯಿತು. ಚೊಚ್ಚಲ ವಿಶ್ವಕಪ್ ಆಯೋಜಿಸಿದ್ದ ಇಂಗ್ಲೆಂಡ್ ಚಾಂಪಿಯನ್ ಆಯಿತು. ಬಳಿಕ 1978, 1982, 1988ರಲ್ಲಿ ಸತತ ಮೂರು ವರ್ಷ ಆಸ್ಟ್ರೇಲಿಯಾ ಚಾಂಪಿಯನ್ ಆಯಿತು. 1993ರಲ್ಲಿ ಪುನಃ ಇಂಗ್ಲೆಂಡ್ ಗೆದ್ದಿತು. 1997ರಲ್ಲಿ ಮತ್ತೆ ಆಸ್ಟ್ರೇಲಿಯಾ 2000ರಲ್ಲಿ ನ್ಯೂಜಿಲೆಂಡ್, 2005ರಲ್ಲಿ ಪುನಃ ಆಸೀಸ್, 2009ರಲ್ಲಿ ಇಂಗ್ಲೆಂಡ್ ಪುನಃ 2013ರಲ್ಲಿ ಆಸೀಸ್, ಮತ್ತೆ 2017ರಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಯಿತು. ಏಕದಿನ ವಿಶ್ವಕಪ್ನಲ್ಲಿ ಬರೀ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನದ್ದೇ ದರ್ಬಾರು. 11ರಲ್ಲಿ 6 ಬಾರಿ ಆಸ್ಟ್ರೇಲಿಯಾ 4 ಬಾರಿ ಇಂಗ್ಲೆಂಡ್ ಹಾಗೂ ಒಮ್ಮೆ ಮಾತ್ರ ನ್ಯೂಜಿಲೆಂಡ್ ಚಾಂಪಿಯನ್ ಆಗಿದೆ. ಭಾರತ (2005) ಒಂದು ಬಾರಿ ರನ್ನರಪ್ ಆಗಿದೆ.
ಇನ್ನು ಮಹಿಳಾ ಟಿ20 ವರ್ಲ್ಡ್ಕಪ್ ಇತಿಹಾಸವನ್ನು ನೋಡುವುದಾದರೆ, 2009ರಿಂದ ಈ ವರ್ಷದ ವಿಶ್ವಕಪ್ವರೆಗೆ 7ಬಾರಿ ವಿಶ್ವಕಪ್ ನಡೆದಿದೆ. ಈ 7ರಲ್ಲಿ ಬರೋಬ್ಬರಿ 5 ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ, ಒಮ್ಮೆ ಇಂಗ್ಲೆಂಡ್ (2009) ಮತ್ತು ಒಮ್ಮೆ ವೆಸ್ಟ್ಇಂಡೀಸ್ (2016) ಚಾಂಪಿಯನ್ ಆಗಿದೆ. 2010, 2012, 2014, 2016, 2018 ಮತ್ತು 2020ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ.