ಇಡೀ ವಿಶ್ವವೇ ಅತ್ಯಂತ ಕಾತುರದಿಂದ ಎದುರು ನೋಡುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ಗೆ, ಇನ್ನು 13 ದಿನಗಳಷ್ಟೇ ಬಾಕಿ ಇದೆ. ಆಂಗ್ಲರ ನಾಡಲ್ಲಿ ನಡೆಯುವ ಈ ಮಹಾ ಸಂಗ್ರಾಮದಲ್ಲಿ ಗೆದ್ದು, ಟ್ರೋಫಿ ಎತ್ತಿ ಹಿಡಿಯಲು ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಮತ್ತೊಂದೆಡೆ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಟೂರ್ನಿಯನ್ನ, ಯಶಸ್ವಿಯಾಗಿ ನಡೆಸಲು ಐಸಿಸಿ ಸಂಸ್ಥೆ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲದೇ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಹಾಗು ರನ್ನರ್ ಅಪ್ ಆಗುವ ತಂಡ ಪಡೆಯುವ ಬಹುಮಾನದ ಮೊತ್ತ ಎಷ್ಟು ಅನ್ನೋದನ್ನ ಸಹ ಬಹಿರಂಗಪಡಿಸಿದೆ. ಅದರಂತೆ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತಂಡ 28 ಕೋಟಿ ಮೊತ್ತ ಪಡೆಯಲಿದೆ. ಇದು ಈವರೆಗಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚಿನ ಮೊತ್ತವಾಗಿದೆ.ರನ್ನರ್ ಅಪ್ ತಂಡ 14 ಕೋಟಿ ಮೊತ್ತ ತನ್ನದಾಗಿಸಿಕೊಳ್ಳಲಿದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ 5 ಕೋಟಿ ಲಭಿಸಲಿದೆ. ಲೀಗ್ ಸ್ಟೇಜ್ ದಾಟುವ ಪ್ರತಿ ತಂಡಕ್ಕೆ ಐಸಿಸಿ 70 ಲಕ್ಷ ನೀಡಲಿದೆ. ಮೇ 30 ರಿಂದ ವಿಶ್ವಕಪ್ಗೆ ಚಾಲನೆ ದೊರೆಯಲಿದೆ. ಒಟ್ಟು 45 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಇಂಗ್ಲೆಂಡ್ನ 11 ಅಂಗಳಗಳು ಪಂದ್ಯಗಳಿಗೆ ಸಾಕ್ಷಿಯಾಗಲಿದೆ.ಜುಲೈ 14ರಂದು ಫೈನಲ್ ಪಂದ್ಯ ನಡೆಯಲಿದೆ.ಟೀಂ ಇಂಡಿಯಾ ಜೂನ್ 5 ರಂದು ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ.
ವಿಶ್ವಕಪ್‍ನಲ್ಲಿ ಗೆದ್ದೋರಿಗೆ ಎಷ್ಟು..? ಸೋತೋರಿಗೆ ಎಷ್ಟು ಹಣ ಗೊತ್ತಾ..?
Date: