ವಿಶ್ವದ ಹತ್ತು ಅದ್ಭುತ ರೈಲ್ವೇ ಸ್ಟೇಷನ್ ಗಳಿವು ಟಾಪ್ 5 ಲಿಸ್ಟ್ ನಲ್ಲಿದೆ ಭಾರತದ ರೈಲ್ವೇ ಸ್ಟೇಷನ್..?!

Date:

ವಿಶ್ವದ ಹತ್ತು ಅದ್ಭುತ ರೈಲ್ವೇ ಸ್ಟೇಷನ್ ಗಳಿವು ಟಾಪ್ 5 ಲಿಸ್ಟ್ ನಲ್ಲಿದೆ ಭಾರತದ ರೈಲ್ವೇ ಸ್ಟೇಷನ್..?!

ಚೀನಾದ ತಾಂತ್ರಿಕತೆ ವಿಶ್ವ ಮಟ್ಟದಲ್ಲಿ ಬೆಳೆಯುತ್ತಿದೆ. ನಿನ್ನೆ ತಾನೆ ಏಷ್ಯಾದ ಅತಿ ದೊಡ್ಡ ಭೂಗತ ರೈಲ್ವೇ ಮಾರ್ಗವನ್ನು ಅನಾವರಣಗೊಳಿಸಿ ಬೀಗುತ್ತಿದೆ. ವಿಶೇಷವೆಂದರೆ ಆ ದೇಶದ ರೈಲ್ವೇ ನಿಲ್ದಾಣಗಳೂ ಕೂಡಾ ಉನ್ನತ ಗುಣಮಟ್ಟದಿಂದ ಕೂಡಿದ್ದು, ವಿಶ್ವಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. ಆದರೆ ಅವುಗಳಿಗಿಂತ ಕೆಲವೊಂದು ರೈಲ್ವೇ ನಿಲ್ದಾಣಗಳು ವಿಶ್ವದ ಅದ್ಭುತ ರೈಲ್ವೇ ನಿಲ್ದಾಣಗಳು ಎಂಬ ಖ್ಯಾತಿಯನ್ನು ಪಡೆದಿವೆ. ಅಂತಹ ಹತ್ತು ರೈಲ್ವೇ ನಿಲ್ದಾಣಗಳು ಇಲ್ಲಿವೆ ನೋಡಿ.

1. ಗ್ರ್ಯಾಂಡ್ ಸ್ಟೇಷನ್ ಟರ್ಮಿನಲ್, ನ್ಯೂಯಾರ್ಕ್, ಅಮೆರಿಕಾ

1280px-Image-Grand_central_Station_Outside_Night_2

1913ರಲ್ಲಿ ನಿರ್ಮಾಣವಾದ ನ್ಯೂಯಾರ್ಕ್ ನ ಗ್ರ್ಯಾಂಡ್ ಸ್ಟೇಷನ್ ಟರ್ಮಿನಲ್ ರೈಲ್ವೇ ನಿಲ್ದಾಣ ವಿಶ್ವ ಅತಿ ದೊಡ್ಡ ರೈಲ್ವೇ ನಿಲ್ದಾಣ ಎಂಬ ಖ್ಯಾತಿಯನ್ನು ಪಡೆದಿದೆ. ಅಲ್ಲಿ 44 ಪ್ಲಾಟ್ ಫಾರ್ಮ್ ಮತ್ತು 67 ರೈಲ್ವೇ ಲೈನ್ ಗಳಿವೆ. ಈ ನಿಲ್ದಾಣಕ್ಕೆ ಪ್ರತಿ ವರ್ಷ ಕನಿಷ್ಟ ನಾಲ್ಕು ಕೋಟಿ ಜನರು ಭೇಟಿ ನೀಡುತ್ತಾರೆ. ವಿಶೇಷವೆಂದರೆ ಈ ರೈಲ್ವೇ ನಿಲ್ದಾಣದ ಸೌಂದರ್ಯವನ್ನು ಗಮನಿಸಿ ಇದಕ್ಕೆ ವಿಶ್ವದ ಅತಿ ಸುಂದರ ರೈಲ್ವೇ ನಿಲ್ದಾಣಗಳಲ್ಲೊಂದು ಎಂದು ಕರೆಯಲಾಗುತ್ತದೆ.

2. ಅಟೋಂಚಾ ರೈಲ್ವೇ ನಿಲ್ದಾಣ, ಮ್ಯಾಡ್ರಿಡ್, ಸ್ಪೇನ್

beautiful-railway-station1
ಸ್ಪೇನ್ ದೇಶದ ಮ್ಯಾಡ್ರಿಡ್ ನಲ್ಲಿರುವ ಅಟೋಂಚಾ ರೈಲ್ವೇ ನಿಲ್ದಾಣ ವಿಶ್ವದ ಎರಡನೇ ಅತಿ ಸುಂದರ ರೈಲ್ವೇ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ. ರಫಾಯಲ್ ಮೋನಿಯೋ ಎಂಬುವವರಿಂದ ಇದರ ಡಿಸೈನ್ ಮಾಡಿಸಲಾಗಿದೆ. ವಿಶೇಷವೆಂದರೆ ಈ ನಿಲ್ದಾಣದಲ್ಲಿ ಒಂದು ಚಿಕ್ಕ ಕಾಡನ್ನು ನಿರ್ಮಿಸಲಾಗಿದೆ..! ಅಲ್ಲಿನ ಮರಗಳ ಮಧ್ಯೆ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳು ಕಾಣಸಿಗುತ್ತವೆ.

3. ಸೇಂಟ್ ಫ್ರಾಂಕೋಯಿಸ್ ಇಂಟರ್ ನ್ಯಾಷನಲ್ ರೈಲ್ವೇ ನಿಲ್ದಾಣ, ಲಂಡನ್, ಇಂಗ್ಲೇಂಡ್

beautiful-railway-station2

ಇಂಗ್ಲೆಂಡ್ ನ ಈ ರೈಲ್ವೇ ನಿಲ್ದಾಣವನ್ನು ನೋಡುತ್ತಿದ್ದರೆ ಭವ್ಯ ಕಟ್ಟಡ ನೋಡಿದಂತಹ ಅನುಭವವನ್ನು ನೀಡುತ್ತದೆ. ಇದಕ್ಕೆ ಕ್ಯಾಥೆಡ್ರಲ್ ಆಫ್ ದ ರೈಲ್ವೇ ಸ್ಟೇಷನ್ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. 1868ರಲ್ಲಿ ವಿಕ್ಟೋರಿಯಾದ ವಾಸ್ತುಶಿಲ್ಪಿಗಳು ಈ ಸುಂದರ ರೈಲ್ವೇ ನಿಲ್ದಾಣವನ್ನು ನಿರ್ಮಿಸಿದ್ದಾರೆ.

4. ಛತ್ರಪತಿ ಶಿವಾಜಿ ಟರ್ಮಿನಲ್, ಮುಂಬೈ

f

 

ಭಾರತ, ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣ ವಿಶ್ವದ ನಾಲ್ಕನೇ ಅದ್ಭುತ ರೈಲ್ವೇ ನಿಲ್ದಾಣ ಎಂಬ ಖ್ಯಾತಿಯನ್ನು ಪಡೆದಿದೆ. ಇದರ ಡಿಸೈನನ್ನು ಫ್ರೆಡರಿಕ್ ವಿಲಿಯಂ ಸ್ಟೀವನ್ಸ್ ಎಂಬ ವ್ಯಕ್ತಿ ಮಾಡಿದ್ದಾನೆ. ವಿಶೇಷವೆಂದರೆ ಈ ರೈಲ್ವೇ ನಿಲ್ದಾಣವನ್ನು ವಿಶ್ವ ಪಾರಂಪಾರಿಕ ತಾಣ ಎಂಬ ಯುನೆಸ್ಕೋ ಪರಿಗಣಿಸಿದೆ. ಈ ರೈಲ್ವೇ ನಿಲ್ದಾಣಕ್ಕೆ ಪ್ರತಿ ದಿನ ಕನಿಷ್ಟ 30 ಲಕ್ಷ ಭೇಟಿ ನೀಡುತ್ತಾರೆ.

5. ಗಾರೆ ಡಿ ಸ್ಟ್ರಾಸ್ ಬರ್ಗ್, ಫ್ರಾನ್ಸ್

beautiful-railway-station4

ಫ್ರಾನ್ಸ್ ನ ಈ ರೈಲ್ವೇ ನಿಲ್ದಾಣವನ್ನು ಯೂರೋಪ್ ನ ಅತ್ಯಂತ ಸ್ವಚ್ಛ ರೈಲ್ವೇ ನಿಲ್ದಾಣ ಎಂದು ಕರೆಯಲಾಗುತ್ತದೆ. 1883ರಲ್ಲಿ ಬರ್ಲಿನ್ ಮೂಲದ ಆರ್ಕೆಟೆಕ್ಚರ್ ಜೋಹಾನ್ ಜೈಕ್ ಬಸ್ತಲ್ ಎಂಬುವವರು ಈ ರೈಲ್ವೇ ನಿಲ್ದಾಣವನ್ನು ವಿನ್ಯಾಸಗೊಳಿಸಿದರು. ವಿಶೇಷವೆಂದರೆ ಪ್ರತಿ ವರ್ಷ ಈ ರೈಲ್ವೇ ನಿಲ್ದಾಣಕ್ಕೆ 19 ಕೋಟಿ ಜನ ಭೇಟಿ ನೀಡುತ್ತಾರೆ.

6. ಕೌಲಾಲಂಪುರ್ ರೈಲ್ವೇ ಸ್ಟೇಷನ್, ಮಲೇಷ್ಯಾ

beautiful-railway-station5
ಕೌಲಾಲಂಪುರ್ ನ ಈ ರೈಲ್ವೇ ನಿಲ್ದಾಣ ವಿಶ್ವದ ಆರನೇ ಅತಿ ಸುಂದರ ರೈಲ್ವೇ ನಿಲ್ದಾಣ ಎಂದು ಕರೆಯಲಾಗುತ್ತದೆ. ಇದನ್ನು 1917ರಲ್ಲಿ ಅರ್ಥನ್ ಬೆನ್ಸಿಕ್ ಹಬಬೈಕ್ ಎಂಬುವವನು ವಿನ್ಯಾಸಗೊಳಿಸಿದ.

7. ಬರ್ಲಿನ್ ಹ್ಯಾಂಪ್ಟ್ ಬನೋಫ್, ಜರ್ಮನಿ

beautiful-railway-station6
ಜರ್ಮನಿಯ ಈ ರೈಲ್ವೇ ನಿಲ್ದಾಣ ಆಧುನಿಕ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದನ್ನು ಯೂರೋಪ್ ನ ಅತಿ ದೊಡ್ಡ ಹಾಗೂ ಸುಂದರ ರೈಲ್ವೇ ನಿಲ್ದಾಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಇಲ್ಲಿ ಪ್ರತಿ ದಿನ ಕನಿಷ್ಟ 2000 ರೈಲುಗಳು ಓಡಾಡುತ್ತವೆ ಮತ್ತು ಕನಿಷ್ಟ 3 ಲಕ್ಷ ಜನ ಓಡಾಡುತ್ತಾರೆ.

8. ಆ್ಯಂಟ್ ವರ್ಪ್ ರೈಲ್ವೇ ನಿಲ್ದಾಣ, ಬೆಲ್ಜಿಯಂ

beautiful-railway-station7
ಬೆಲ್ಜಿಯಂ ನ ಈ ರೈಲ್ವೇ ನಿಲ್ದಾಣ ಅದ್ಭುತ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವನ್ನು ಲೂಯಿಸ್ ಡೆಲಾಸೆಂಸರಿ ಎಂಬಾತ ಮಾಡಿದ್ದಾನೆ. ಇದನ್ನು 1905ರಲ್ಲಿ ಪ್ರಯಾಣಿಕರಿಗಾಗಿ ತೆರೆಯಲಾಯಿತು. ವಿಶೇಷವೆಂದರೆ ಪ್ರಯಾಣಿಕರನ್ನು ಬಿಟ್ಟು ಬೇರೆ ಜನರು ಇಲ್ಲಿಗೆ ಬಂದು ರೈಲ್ವೇ ನಿಲ್ದಾಣದ ಸೌಂದರ್ಯವನ್ನು ಆಸ್ವಾದಿಸುತ್ತಾರೆ ಎಂದರೆ ಈ ರೈಲ್ವೇ ನಿಲ್ದಾಣದ ಸೌಂದರ್ಯ ಎಂಥದ್ದು ಎಂದು ಅರಿವಾಗುತ್ತದೆ.

9. ಕಂಜಾವಾ ಸ್ಟೇಷನ್, ಜಪಾನ್

beautiful-railway-station8
ಬೃಹತ್ ಪ್ರಮಾಣದ ಹಾಗೂ ಅದ್ಭುತ ವಿನ್ಯಾಸದ ಈ ರೈಲ್ವೇ ನಿಲ್ದಾಣ ವಿಶ್ವದಾದ್ಯಂತ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ರೈಲ್ವೇ ನಿಲ್ದಾಣವನ್ನು 1898ರಲ್ಲಿ ನಿರ್ಮಿಸಲಾಯಿತು. ಆದರೆ 2005ರಲ್ಲಿ ಮತ್ತೇ ಪುನರ್ ನಿರ್ಮಿಸಲಾಗಿದೆ.

10. ಸೌಥರ್ನ್ ಕ್ರಾಸ್ ಸ್ಟೇಷನ್, ಆಸ್ಟ್ರೇಲಿಯಾ

beautiful-railway-station9
ಮೆಲ್ಬೋರ್ನ್ ನ ಈ ರೈಲ್ವೇ ನಿಲ್ದಾಣವನ್ನು ವಿಶ್ವದ ಅದ್ಭುತ ರೈಲ್ವೇ ನಿಲ್ದಾಣ ಎಂದು ಕರೆಯಲಾಗುತ್ತದೆ. ಇದು ಬೃಹತ್ ಟ್ರಾನ್ಸ್ ಪೋರ್ಟ್ ಹಬ್ ಆಗಿ ಕೂಡಾ ಹೆಸರು ಮಾಡಿದೆ. 2002ರಲ್ಲಿ ಇದನ್ನು ಡಿಸೈನ್ ಮಾಡಲಾಯಿತು.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...