ಯತಿಶ್ರೇಷ್ಠ, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಕೃಷ್ಣೈಕ್ಯರಾಗಿರುವುದರಿಂದ ಭಕ್ತಕೋಟಿ ಶೋಕದ ಸಾಗರದಲ್ಲಿ ಮುಳುಗಿದೆ. 7ನೇ ವಯಸಲ್ಲೇ ಸನ್ಯಾನ ದೀಕ್ಷೆ ಸ್ವೀಕರಿಸಿ, ಧಾರ್ಮಿಕ, ಸಾಮಾಜಿ ಸೇವೆಯನ್ನೇ ಉಸಿರಾಗಿಸಿಕೊಂಡು ಬದುಕಿದ ಸಂತ ವಿಶ್ವೇಶ ತೀರ್ಥರು ಬೃಂದಾವನಸ್ತರಾಗಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಎಲ್ಲರ ಮನದಲ್ಲೂ ನೀರವ ಮೌನ ಆವರಿಸಿ, ಅನಾಥ ಪ್ರಜ್ಞೆ ಎಲ್ಲರನ್ನೂ ಕಾಡುತ್ತಿದ. ಇಂಥಾ ಮಹಾನ್ ಸಂತರ ಬಗ್ಗೆ ವರಕವಿ ದ ರಾ ಬೇಂದ್ರೆ ಅದ್ಭುತ ಸಾಲುಗಳನ್ನು ಬರೆದಿದ್ದರು.
“ಸಜ್ಜನರನು ಕಾಪಾಡುವ ಸ್ವಾಮೀ ಪಾಡುವೆ ನಿನ್ನಾನಾಮಾ; ವಿಶ್ವಕ್ಕೂ ಸರಿ, ವಿಶ್ವನಿಗೂ ಸರಿ; ವಿಶ್ವೇಶ್ವರನಿಗೂ ಸರಿಯೇ” ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರ ಬಗ್ಗೆ ವರಕವಿ ದ ರಾ ಬೇಂದ್ರೆಯವರು ಬರೆದಿದ್ದರು. ಗುರು ಕುಲಕರ್ಣಿ ಎಂಬುವವರು ಟ್ವಿಟ್ಟರಲ್ಲಿ ಈ ಸಾಲುಗಳನ್ನು ಶೇರ್ ಮಾಡಿ ವಿಶ್ವ ಸಂತನಿಗೆ ನಮಿಸಿದ್ದಾರೆ.
ವರಕವಿ ದ ರಾ ಬೇಂದ್ರೆ ಪೂಜ್ಯ ವಿಶ್ವೇಶತೀರ್ಥರ ಬಗ್ಗೆ 1968ರಲ್ಲಿ ಬರೆದದ್ದು
1968 : Poet Bendre on H H #PejawaraSri
ಸಜ್ಜನರನು ಕಾಪಾಡುವ ಸ್ವಾಮೀ
ಪಾಡುವೆ ನಿನ್ನಾನಾಮಾ;
ವಿಶ್ವಕ್ಕೂ ಸರಿ, ವಿಶ್ವನಿಗೂ ಸರಿ;
ವಿಶ್ವೇಶ್ವರನಿಗು ಸರಿಯೇ; pic.twitter.com/GL93F1dVk0— गुरुः(Guru Kulkarni) (@geekayji) December 28, 2019
೧೯೬೮ರಲ್ಲಿ ಪ್ರಕಟವಾದ ‘ನಿವೇದನ’, `ತತ್ವವಾದ’ ಎಂಬ ವಿಶೇಷ ಸಂಚಿಕೆಯಲ್ಲಿ ಶ್ರೀಗಳ ಬಗ್ಗೆ ದ ರಾ ಬೇಂದ್ರೆ ಬರೆದ ಸಾಲುಗಳು ಪ್ರಕಟವಾಗಿದ್ದವು. ಶ್ರೀ ವಿಶ್ವೇಶತೀರ್ಥರು ಗೆಳೆಯ ಹರಿದಾಸ ಭಟ್ಟರ ಮನೆಯಲ್ಲಿರುವಾಗ ಸ್ವಪ್ನದಲ್ಲಿ ಬಂದು ಅಂತ:ಕರಣದ ಮಾತನಾಡಿದರು. ಕನಕನ ಸೇವೆ ನನಗೂ ಉಡುಪಿಯಲ್ಲಿ ಸಂದಿತು. ಬಾಲ್ಯದಲ್ಲಿ ದಾಸ ಗೋವಿಂದಪ್ಪನವರಿAದ, ತಾರುಣ್ಯದಲ್ಲಿ ಗುರುವರ್ಯ ಮಧ್ವಾಚಾರ್ಯ ಕಟ್ಟಿಯವರಿಂದ ಸಾಗಿಬಂದ ಈ ಸತ್ಸಂಗಫಲವು ೭೩ರ ಈ ಮುಕ್ಕಟ್ಟಿನಲ್ಲಿ ಇಂಥ ಮಹನೀಯರ ಸ್ನೇಹದಿಂದ ಸಫಲವೆನಿಸಿತು. ಸ್ವಾಮಿಗಳು ಅಸಾಮಾನ್ಯರು, ಶ್ರೀ ಕೃಷ್ಣನಿಗೆ ಮಾನ್ಯರು; ಲೋಕಮಾನ್ಯರು ಶ್ರೀಗಳನ್ನು ನೆನೆದಿದ್ದಾರೆ ಗುರು ಕುಲರ್ಣಿ.