ಪ್ರಪಂಚದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಲೆಕ್ಕವಿಲ್ಲದಷ್ಟು ವಿಚಿತ್ರ ಬೆಳವಣಿಗೆಗಳು ನಡೆಯುತ್ತವೆ. ಅವುಗಳಲ್ಲಿ ಹುಟ್ಟು ಕೂಡ ಒಂದು . ಅಂತಹದ್ದೇ ಒಂದು ವಿಸ್ಮಯಕಾರಿ ಜನನ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವನ್ನು ಕಂಡು ಅಕ್ಷರಶಃ ವೈದ್ಯರೇ ಶಾಕ್ ಆಗಿದ್ದಾರೆ. ಇದು ವೈದ್ಯಲೋಕವನ್ನೇ ನಿಬ್ಬೆರಗಾಗಿಸುವ ಮಗುವಿನ ಜನನದ ಕಥೆ.
ವಿದಿಶಾ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಎರಡು ತಲೆಗಳಿವೆ… ಮೂರು ಕೈಗಳಿವೆ.! ಇದನ್ನು ಕಂಡು ಕುಟುಂಬದವರು, ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಆಸ್ಪತ್ರೆಯಲ್ಲಿದ್ದವರು ಕೂಡ ಮಗುವನ್ನು ಕಂಡ ಬೆಚ್ಚಿದ್ದಾರೆ. ಮಗುವಿನ ಕುತ್ತಿಗೆ ಭಾಗದಿಂದ ಪ್ರತ್ಯೇಕ ಎರಡು ತಲೆಗಳು ಹೊರ ಬಂದಿವೆ..! ಅಲ್ಲದೆ ಮೂರು ಕೈಗಳಳನ್ನು ಈ ಮಗು ಹೊಂದಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ವಿದಿಶಾ ಜಿಲ್ಲಾಸ್ಪತ್ರೆಯಲ್ಲಿ ಇಂತಹದ್ದೊಂದು ವಿಚಿತ್ರ ಮಗು ಜನಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ವೈದ್ಯರ ಸೂಚನೆಯ ಮೇರೆಗೆ ಸದ್ಯ ಮಗುವನ್ನು ಚಿಕಿತ್ಸೆಗೆ ಭೋಪಾಲಿಗೆ ಕರೆದೊಯ್ದಿದ್ದಾರೆ.
ವೈದ್ಯಲೋಕಕ್ಕೇ ಶಾಕ್ ನೀಡಿದ ಎರಡು ತಲೆ, ಮೂರು ಕೈಗಳ ಮಗು!
Date: