ಹಾವೇರಿ: ಶಂಕಿತ ಡೆಂಘೀಗೆ 9 ವರ್ಷದ ಮಗು ಬಲಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಗಿ ಗ್ರಾಮದಲ್ಲಿ ನಡಿದಿದೆ.
ಮಾಸಣಗಿ ಗ್ರಾಮದ ದ್ಯಾಮಪ್ಪ ಬನ್ನಿಹಟ್ಟಿ ಎಂಬುವರ ಪುತ್ರಿ ದಿವ್ಯ ದ್ಯಾಮಪ್ಪ ಬನ್ನಿಹಟ್ಟಿ ಮೃತ ದುರ್ದೈವಿ ಯಾಗಿದ್ದು,
ಕಳೆದ 12 ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದ ಮಗು ಪಟ್ಟಣದ ಪೂಜಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿಯ ಆಶ್ರಯ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು.
ಶಂಕಿತ ಡೆಂಘೀ ಎಂದು ದಾವಣಗೆರೆಯ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅದಲ್ಲದೆ ಮತ್ತಷ್ಟು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಮಗು ನಿನ್ನೆ ಮೃತಪಟ್ಟಿದೆ.