ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್

Date:

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಾಳೆ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ 2 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನವಾಗಬಹುದು ಎಂದು ತಿಳಿಸಿದ್ದಾರೆ. ಅಧಿವೇಶನದಲ್ಲಿ ಮನರೇಗಾ ಯೋಜನೆಯ ಮರುಜಾರಿ ಮಹತ್ವ ಮತ್ತು ಕೇಂದ್ರ ಸರ್ಕಾರದ ನೂತನ ಕಾಯ್ದೆಗಳ ಅನಾನುಕೂಲತೆಗಳನ್ನು ಚರ್ಚಿಸಲಾಗುತ್ತದೆ.
ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ “ಮನರೇಗಾ ಬಚಾವ್ ಸಂಗ್ರಾಮ” ಪೂರ್ವಸಿದ್ಧತಾ ಸಭೆ ನಲ್ಲಿ ಶಿವಕುಮಾರ್ ಮಾತನಾಡಿದರು. ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ ಮಾಡಲಾಗುವುದು.
ಈ ಅಧಿವೇಶನದಲ್ಲಿ ಮನರೇಗಾ ಯೋಜನೆ ಮರುಜಾರಿಯ ಮಹತ್ವ ಹಾಗೂ ಕೇಂದ್ರ ಸರ್ಕಾರದ ನೂತನ ಕಾಯ್ದೆಯ ಅನಾನುಕೂಲಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು. ನಂತರ ಸರ್ಕಾರ ನಿರ್ಣಯ ಕೈಗೊಳ್ಳಲಿದೆ. ಇನ್ನು ಈ ಎಐಸಿಸಿ ಕಾರ್ಯಕ್ರಮಗಳನ್ನು ನಿಮ್ಮ ಸ್ಥಳೀಯ ಮಟ್ಟದಲ್ಲಿ ನಡೆಸುವಾಗ ಎಲ್ಇಡಿ ಪರದೆ ಹಾಕಿಸಿ ಸೋನಿಯಾ ಗಾಂಧಿ ಅವರ ಸಂದೇಶವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು.
ಬಳಿಕ ಜ.26ರಿಂದ ಫೆ.7ರವರೆಗೆ ಎಲ್ಲಾ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5-10 ಕಿ.ಮೀ ಪಾದಯಾತ್ರೆ ಮಾಡಬೇಕು. ಇದರಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ನಮ್ಮ ನಾಯಕರು ಶಾಸಕರು ಹಾಗೂ ಸಚಿವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕು. ನಂತರ ಮನರೇಗಾ ಮರುಜಾರಿಗೆ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಬೇಕು.
ಸುಮಾರು ಐದಾರು ಕಡೆ ಪಾದಯಾತ್ರೆ ಮಾಡಲು ನಾನೇ ಖುದ್ದಾಗಿ ಬರುತ್ತೇನೆ. ವಿಶೇಷವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಬಂದೇ ಬರುತ್ತೇನೆ. ಈ ವಿಚಾರವಾಗಿ ನಾಗರಾಜ ಗೌಡ ಅವರಿಗೆ ತಿಳಿಸಿದ್ದೇನೆ. ಎಲ್ಲಿ ಶಾಸಕರಿಲ್ಲವೋ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಇದು ಬಹಳ ಪ್ರಮುಖವಾದ ವಿಚಾರ” ಎಂದು ಮಾರ್ಗದರ್ಶನ ನೀಡಿದರು.

Share post:

Subscribe

spot_imgspot_img

Popular

More like this
Related

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ ಶೋಕ

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ...

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ ಬೆಂಗಳೂರು:...

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.!

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.! ಬೆಂಗಳೂರು:...