ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಅವರ ಬಾವ ಹಾಗೂ ಬಿಜೆಪಿ ಶಾಸಕ ಆಗಿರೋ ಕುಮಾರ ಬಂಗಾರಪ್ಪ ಅವರು ಸವಾಲು ಹಾಕಿದ್ದಾರೆ.
ಸಿನಿಮಾ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬರುವುದು ಬೇಡ. ಬರುವ ಆಸೆ ಇದ್ದರೆ ನೇರವಾಗಿ ಬರಲಿ ಎಂದಿದ್ದಾರೆ. ಕವಚ ಸಿನಿಮಾದ ಹೆಸರನ್ನು ಬಳಸಿಕೊಂಡು ಟಾಂಗ್ ನೀಡಿದ ಕುಮಾರ ಬಂಗಾರಪ್ಪ, ಶಿವರಾಜ್ಕುಮಾರ್ ‘ಕವಚ’ ತೆಗೆದಿಟ್ಟು ರಾಜಕೀಯಕ್ಕೆ ಬರಲಿ. ಚುನಾವಣೆಗೆ ಕವಚ ಹೆಸರಲ್ಲಿ ಬರುವುದು ಬೇಡ ಎಂದು ಹೇಳಿದ್ದಾರೆ.
ರಾಜ್ಕುಮಾರ್ ಕುಟುಂಬದವರು ರಾಜಕೀಯದಿಂದ ದೂರ ಎಂದು ಹೇಳುವ ಶಿವಣ್ಣ ಸಿನಿಮಾ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಅನ್ನು ಇಟ್ಟುಕೊಮಡು ಮುಂದೆ ಕವಚ ಇಟ್ಟುಕೊಂಡಿದ್ದಾರೆ. 5 ವರ್ಷ ಶಿವಮೊಗ್ಗ ಕಂಡಿರಲಿಲ್ಲ. ಎಲೆಕ್ಷನ್ ಮುಗಿದ ಮೇಲೆ ಮತ್ತೆ ಶಿವಮೊಗ್ಗ ನೆನಪಿರಲ್ಲ ಎಂದರು. ಶಿವಣ್ಣ ಅವರಲ್ಲದೆ ಕುಮಾರ ಬಂಗಾರಪ್ಪ ತನ್ನ ಸಹೋದರಿ ಗೀತಾ ಅವರ ವಿರುದ್ಧ ಕೂಡ ಗುಡುಗಿದರು.
ಶಿವಣ್ಣಗೆ ಕವಚ ಕಳಚಿಟ್ಟು ಬನ್ನಿ ಎಂದು ಸವಾಲು ಹಾಕಿದ ಬಾವ ಕುಮಾರ ಬಂಗಾರಪ್ಪ..!
Date: