ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್!
ನಟ ಶಿವರಾಜ್‌ಕುಮಾರ್ ಇಂದು ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದಾರೆ. ಈ ಹಿನ್ನೆಲೆ ಶಿವಣ್ಣನ ಮನೆಗೆ ನಟ ಕಿಚ್ಚ ಸುದೀಪ ಆಗಮಿಸಿದ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇಂದು ಶಿವಣ್ಣನ ಮನೆಗೆ ತೆರಳಿದ ಕಿಚ್ಚ ಸುದೀಪ ಸುದೀರ್ಘವಾದ ಸಮಯವನ್ನು ಅವರೊಂದಿಗೆ ಕಳೆದಿದ್ದಾರೆ. ಭೇಟಿ ವೇಳೆ ಆರೋಗ್ಯ ವಿಚಾರಿಸಿದ್ದಾರೆ ಗಟ್ಟಿಯಾಗಿ ತಬ್ಬಿಕೊಂಡು ಭಾವುಕರು ಆಗಿದ್ದರು. ಕಿಚ್ಚ ಜೊತೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವ ಮಧು ಬಂಗಾರಪ್ಪ ಕೂಡ ಇದ್ದರು. ಎಲ್ಲರೂ ಒಂದೇ ಕಡೆ ಸೇರಿಕೊಂಡು ಉಭಯಕುಶೋಲಪರಿಯನ್ನು ವಿಚಾರಿಸಿದರು. ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇಂದು ರಾತ್ರಿ 8:30ಗೆ ಶಿವಣ್ಣ ತೆರಳಲಿದ್ದು, ಅವರೊಟ್ಟಿಗೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಸಹ ತೆರಳುವ ಸಾಧ್ಯತೆ ಇದೆ.