ಶುರುವಾಯ್ತು ಬೇಸಿಗೆ: ಎಸಿ ಇಲ್ಲದೆಯೇ ಮನೆ ತಂಪಾಗಿಡುವುದು ಹೇಗೆ?

Date:

ಶುರುವಾಯ್ತು ಬೇಸಿಗೆ: ಎಸಿ ಇಲ್ಲದೆಯೇ ಮನೆ ತಂಪಾಗಿಡುವುದು ಹೇಗೆ?

ಬೇಸಿಗೆಯಲ್ಲಿ ಎಸಿ ಅಥವಾ ಫ್ಯಾನ್ ಇಲ್ಲದೆಯೇ ಮನೆಯೊಳಗೆ ಕುಳಿತುಕೊಳ್ಳುವುದೇ ದೊಡ್ಡ ಸಾಹಸವೆನಿಸುತ್ತದೆ. ದೇಶಾದ್ಯಂತ ಬಿಸಿಲಿನ ತಾಪವು ಜನರನ್ನು ಬಾಧಿಸುತ್ತಿದೆ. ಬೆಳಿಗ್ಗೆ 8 ಗಂಟೆಯ ಬಳಿಕ ಮನೆಯಿಂದ ಹೊರ ಹೋಗುವುದು ಹೇಗಪ್ಪಾ… ಎನ್ನುವಂತಾಗಿದೆ. ಈ ಮಧ್ಯೆ, ವಿದ್ಯುತ್ ಕಡಿತವು ಸಹ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು ನಿಮಿಷ ಕರೆಂಟ್ ಇಲ್ಲ ಅಂದರೂ ಶೆಕೆಯಿಂದಾಗಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ನೀವೂ ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆಯೂ ಮನೆಯನ್ನು ಕೂಲ್ ಇರಿಸಬಹುದಾದ ವಿಶಿಷ್ಟ ವಿಧಾನದ ಬಗ್ಗೆ ತಿಳಿಯೋಣ.

ಬೇಸಿಗೆಯಲ್ಲಿ ಬಹುತೇಕರು, ಎಸಿ,ಕೂಲರ್ ಫ್ಯಾನ್‌ ಮುಂತಾದ ಇಲೆಕ್ಟ್ರಿಕ್‌ ವಸ್ತುಗಳ ಮೊರೆ ಹೋಗುತ್ತಾರೆ. ಹೀಗಿರುವಾಗ ಬೇಸಿಗೆಯಲ್ಲಿ ಏಸಿ ಇಲ್ಲಿದೆಯೂ ಮನೆಯನ್ನು ತಂಪಾಗಿಡಲು ಕೆಲ ಟಿಪ್ಸ್ ಇಲ್ಲಿದೆ

ಬೇಸಿಗೆಯಲ್ಲಿ ಎಸಿ ಅಥವಾ ಕೂಲರ್ ಇಲ್ಲದೆ ಮನೆಯನ್ನು ತಂಪಾಗಿಡುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ನಿಮಗಾಗಿ ಕೆಲವು ಸಲಹೆಗಳು ಇಲ್ಲಿವೆ. ಮನೆಯ ಸುತ್ತಲೂ ಗಿಡಗಳನ್ನು ಬೆಳೆಸಿ, ಮನೆಯ ತಾರಸಿಯಲ್ಲಿ ಹಬ್ಬು ಬಳ್ಳಿಗಳನ್ನು ಬೆಳೆಸಿ ಇವರು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ನೆರವಾಗುತ್ತವೆ.

ಮನೆಯ ಬಣ್ಣಗಳು:
ಬೇಸಿಗೆ ಕಾಲಕ್ಕೆ ತಕ್ಕಂತೆ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೇಸಿಗೆಯಲ್ಲಿ ಮನೆಯಲ್ಲಿ ಶಾಖ ಹೆಚ್ಚಾಗಲು ಮುಖ್ಯ ಕಾರಣ ಮನೆಗೆ ಹೊಡೆದಿರುವ ಬಣ್ಣಗಳು ಹೀಗಾಗಿ ಮನೆಗೆ ಬಿಳಿ ಮುಂತಾದ ತಿಳಿ ಬಣ್ಣವನ್ನೇ ಆಯ್ಕೆ ಮಾಡಿ. ಮನೆಯೊಳಗೆ ಹೊರಗಿನಿಂದ ಬಿಸಿಗಾಳಿ ಬರದಂತೆ ತಡೆಯಲು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಅವುಗಳ ಹೊರಗೆ ಲೈಟ್‌ ಬಣ್ಣದ ಹತ್ತಿಯ ಪರದೆಗಳನ್ನು ಹಾಕಿ.

ತಂಪಾದ ನೈಸರ್ಗಿಕ ಪರದೆಗಳು
ತೆಂಗಿನ ಮರದ ಗರಿಗಳು, ಅಡಿಕೆ ಮರದ ಗರಿ(ಸೋಗೆ)ತಾಳೆ ಮರದ ಗರಿಗಳು ಮುಂತಾದವುಗಳನ್ನು ಮನೆಯ ತಾರಸಿ ಮೇಲೆ ಹಾಗೂ ಮನೆಯ ಮುಂದೆ ಅವುಗಳ ಚಪ್ಪರ ಹಾಕಿದರೆ ಮನೆಯೊಳಗೆ ತಂಪಾಗಿರುತ್ತದೆ.

ಒಳಾಂಗಣ ಸಸ್ಯಗಳು: ಬೇಸಿಗೆಯಲ್ಲಿ ಮನೆಯಲ್ಲಿ ತಂಪು ಉಳಿಯಲು ಒಳಾಂಗಣ ಸಸ್ಯಗಳನ್ನು ಇರಿಸಿ. ಇವು ಮನೆಗೆ ತಂಪು ನೀಡುವುದಲ್ಲದೆ ಸೌಂದರ್ಯವನ್ನೂ ಹೆಚ್ಚಿಸುತ್ತವೆ

ತಂಪು ದೀಪಗಳು:
ಮಾರುಕಟ್ಟೆಯಲ್ಲಿ ಅನೇಕ ತಂಪು ದೀಪಗಳು ಮಾರಾಟವಾಗುತ್ತಿವೆ. ಈ ಬೇಸಿಗೆಯಲ್ಲಿ ನೀವು ಅವುಗಳನ್ನು ಖರೀದಿಸಿ ಬಳಸಿದರೆ ಮನೆಯಲ್ಲಿ ಅಷ್ಟೊಂದು ಬಿಸಿ ಇರುವುದಿಲ್ಲ.

ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ

ರಾತ್ರಿಯಲ್ಲಿ ಮನೆಯ ಕಿಟಕಿಗಳನ್ನು ತೆರೆಯಿರಿ ಮತ್ತು ಕಿಟಕಿಯ ಬಳಿ ಟೇಬಲ್ ಫ್ಯಾನ್ ಇರಿಸಿ. ಇದು ಕೋಣೆಗೆ ನೈಸರ್ಗಿಕ ಗಾಳಿಯನ್ನು ತರುತ್ತದೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...