ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಆಗಿ ಶ್ರೀನಿಧಿ ಶಾಸ್ತ್ರಿ ಹೊರಹೊಮ್ಮಿದ್ದಾರೆ.
ಸರಿಗಮಪ ಸೀಸನ್ 17ರ ಫೈನಲ್ ನಲ್ಲಿ ಎರಡು ರೌಂಡ್ ಗಳಿದ್ದು ಅದರಲ್ಲಿ ಕಿರಣ್ ಪಾಟೀಲ್ ಮತ್ತು ಶರದಿ ಪಾಟೀಲ್ ಮೊದಲ ರೌಂಡ್ ನಲ್ಲಿ ಎಲಿಮಿನೆಟ್ ಆಗಿದರು. ಇನ್ನು ಫೈನಲ್ ರೌಂಡ್ ಗೆ ಶ್ರೀನಿಧಿ ಶಾಸ್ತ್ರಿ, ಅಶ್ವಿನ್ ಶರ್ಮ ಹಾಗೂ ಕಂಬದ ರಂಗಯ್ಯ ಎಂಟ್ರಿ ಕೊಟ್ಟಿದ್ದರು.
ಫೈನಲ್ ರೌಂಡ್ ನಲ್ಲಿ ಶ್ರೀನಿಧಿ ಶಾಸ್ತ್ರಿ ಆಡಿಯೆನ್ಸ್ ಓಟಿನ ಜೊತೆಗೆ ತೀರ್ಪುಗಾರರು ನೀಡಿದ ಅಂಕಗಳು ಎರಡನ್ನು ಪರಿಗಣನೆಗೆ ತೆಗೆದುಕೊಂಡು ಶ್ರೀನಿಧಿ ಶಾಸ್ತ್ರಿಯನ್ನು ಚಾಂಪಿಯನ್ ಆಗಿ ಘೋಷಿಸಿದರು.
ಇನ್ನು ಅಶ್ವಿನ್ ಶರ್ಮ ಮೊದಲ ರನ್ನರ್ ಅಪ್ ಆಗಿದ್ದರೆ, ಕಂಬದ ರಂಗಯ್ಯ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಚಾಂಪಿಯನ್ ಆಗಿರುವ ಶ್ರೀನಿಧಿ ಶಾಸ್ತ್ರಿ ಅವರು 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. 1 ರನ್ನರ್ ಅಪ್ ಆಗಿರುವ ಅಶ್ವಿನ್ ಶರ್ಮ 5 ಲಕ್ಷ ಬಹುಮಾನ ಪಡೆದರೆ ಕಂಬದ ರಂಗಯ್ಯ 2.5 ಲಕ್ಷ ರುಪಾಯಿ ಬಹುಮಾನ ಪಡೆದಿದ್ದಾರೆ.
ರಹಾನೆಗೆ ಜಾಫರ್ ರಹಸ್ಯ ಸಂದೇಶ..!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ಬಳಿಕ ಸೋಲಿನ ಬಗ್ಗೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 36 ರನ್‌ಗಳಿಗೆ ಆಲ್‌ಔಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನೂ ಕುಗ್ಗಿಸಿರುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಮಾಜಿ ಆಟಗಾರರಿಂದ ಸಾಕಷ್ಟು ಸಲಹೆಗಳು ವ್ಯಕ್ತವಾಗುತ್ತಿದೆ.
ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದ್ದು ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ಗೌಪ್ಯ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶ ವಿಭಿನ್ನವಾಗಿದ್ದು ಸಾಕಷ್ಟು ಕುತೂಹಲಕಾರಿಯಾಗಿದೆ.
ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ನೀಡಿರುವ ಗೌಪ್ಯ ಸಲಹೆ ಹೀಗಿದೆ:
Dear @ajinkyarahane88, here's a (hidden) message for you. Good luck for Boxing Day!
People
In
Cricket
Know
Grief
In
Life
Lingers
Aplenty
Never
Dabble
Rise
And
Handcraft
Unique
LegacyPS: you guys are open to have a go and decode the msg too ????#INDvsAUS #AUSvIND
— Wasim Jaffer (@WasimJaffer14) December 21, 2020
ಇದರ ಜೊತೆಗೆ ಈ ಗೌಪ್ಯ ಸಂದೇಶವನ್ನು ನೀವು ಕೂಡ ಬಿಡಿಸಬಹುದು ಎಂದು ಅಭಿಮಾನಗಳಿಗೆ ವಾಸಿಂ ಜಾಫರ್ ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಈ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿದ್ದು ಜಾಫರ್ ಯಾವ ಸಂದೇಶವನ್ನು ನೀಡಿದ್ದಾರೆ ಎಂದು ತಲೆ ಕೆಡಿಸುತ್ತಿದ್ದಾರೆ. ಈ ಸಂದೇಶದ ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಜಾಫರ್ ಶುಭ ಹಾರೈಸಿದ್ದಾರೆ.
ಇನ್ನು ಈ ಗೌಪ್ಯ ಸಂದೇಶವನ್ನು ಅನೇಕ ಅಭಿಮಾನಿಗಳು ಬಿಡಿಸುವಲ್ಲಿ ಸಫಲರಾಗಿದ್ದಾರೆ. ಟ್ವೀಟ್‌ನಲ್ಲಿ ಒಂದೊಂದೇ ಶಬ್ಧಗಳನ್ನು ಮೇಲಿನಿಂದ ಕೆಳಕ್ಕೆ ಬರೆಯುತ್ತಾ ಕುತೂಹಲ ಮೂಡಿಸುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಓದಿದರೆ ಕ್ರಿಕೆಟ್ ಬಗೆಗಿನ ಸುಂದರವಾದ ಸಂದೇಶವಾಗಿದೆ. ಆದರೆ ಅದರಲ್ಲಿ ಕರಾಮತ್ತು ತೋರಿಸಿದ್ದಾರೆ ವಾಸಿಂ ಜಾಫರ್.
ವಾಸಿಂ ಜಾಫರ್ ಬರೆದ ಈ ಸಂದೇಶದ ಮೊದಲ ಅಕ್ಷರಗಳನ್ನು ಜೋಡಿಸಿದರೆ “PICK GILL AND RAHUL” ಎಂದಾಗುತ್ತದೆ. ಅಂದರೆ ಶುಭ್ಮನ್ ಗಿಲ್ ಹಾಗೂ ರಾಹುಲ್ ಅವರನ್ನು ಆಯ್ಕೆ ಮಾಡುವಂತೆ ವಾಸಿಂ ಜಾಫರ್ ಸಲಹೆಯನ್ನು ನೀಡಿದ್ದು ಅಭಿಮಾನಿಗಳು ಈ ಸವಾಲನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.