ಸಂತೋಷ್ ಲಾಡ್ʼಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ: ಪ್ರತಾಪ್ ಸಿಂಹ
ಮೈಸೂರು: ಸಂತೋಷ್ ಲಾಡ್ʼಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಂತೋಷ್ ಲಾಡ್‌ಗೆ ಮೈತುಂಬಾ ಮೈನಿಂಗ್ ದುಡ್ಡು ಅಂಟಿಕೊಂಡಿದೆ. ಹೊರಗಡೆ ಮಾತ್ರ ತಾನೂ ಬಹಳ ಸಾಚಾ ಅನ್ನೋ ರೀತಿ ಪೋಸ್ ಕೊಡುತ್ತಿದ್ದಾರೆ.
ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡಬೇಕಿತ್ತು. ದುಡ್ಡನ ಕೊಬ್ಬಿನಿಂದ ಲಾಡ್ ಮಾತಾಡ್ತಿದ್ದಾರೆ. ನಿ
ಮಗೆ ದುಡ್ಡು ಇರಬಹುದು, ಪತ್ರಕರ್ತರಿಗೆ ನೈತಿಕತೆ ಇದೆ. ನೆನಪಿಟ್ಟುಕೊಳ್ಳಿ ಲಾಡ್. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ ಎಂದು ಕಿಡಿಕಾರಿದರು.