ಸಂಸದೆ ಸುಧಾ ರಾಮಕೃಷ್ಣನ್ ಚೈನ್ ದೋಚಿದ ಕಳ್ಳ ಬಂಧನ
ನವದೆಹಲಿ: ದೆಹಲಿ ಪೊಲೀಸರು ಚುರುಕಾದ ಕಾರ್ಯಾಚರಣೆ ನಡೆಸಿ ಸಂಸದೆ ಸುಧಾ ರಾಮಕೃಷ್ಣನ್ ಅವರ ಚಿನ್ನದ ಸರ ದೋಚಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 4ರಂದು, ತಮಿಳುನಾಡಿನ ಮೈಲಾಡುತುರೈ ಲೋಕಸಭಾ ಕ್ಷೇತ್ರದ ಸಂಸದೆ ಸುಧಾ ರಾಮಕೃಷ್ಣನ್ ಅವರು ಡಿಎಂಕೆ ಶಾಸಕಿ ರಾಜತಿ ಅವರೊಂದಿಗೆ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಪೋಲೆಂಡ್ ರಾಯಭಾರ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಯೊಬ್ಬನು ಸ್ಕೂಟರ್‌ನಲ್ಲಿ ಬಂದು, ಅವರ ಗಲಭಿ ಪರಿಸ್ಥಿತಿಯನ್ನು ಬಳಸಿಕೊಂಡು ಚೈನ್ ಕಿತ್ತು ಪರಾರಿಯಾಗಿದ್ದ.
ಈ ಕುರಿತು ಅವರು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರ ಮಾಡಿಕೊಂಡು, ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿ ಬಂಧಿಸಿದ್ದಾರೆ.