ಸನ್ನಿ ಲಿಯೋನ್ ಗೆ ಎಚ್ಚರಿಕೆ ನೀಡಿದ ಗೃಹಸಚಿವ!

Date:

ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಎಚ್ಚರಿಕೆಯನ್ನು ನೀಡಿದ್ದು, ಯೂಟ್ಯೂಬ್​ನಿಂದ ‘ಮಧುಬನ್ ಮೇ ರಾಧಿಕಾ ನಾಚೆ’ ಹಾಡನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಹಾಡಿನ ಕುರಿತು ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು ಮತ್ತು ಮೂರು ದಿನಗಳಲ್ಲಿ ಹಾಡನ್ನು ತೆಗೆದುಹಾಕಬೇಕು.

ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧವಾಗಬೇಕು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ರವಾನಿಸಿದ್ದಾರೆ.

ಸನ್ನಿ ಲಿಯೋನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಿಂದೂಗಳು ರಾಧೆಯನ್ನು ಪೂಜಿಸುತ್ತಾರೆ ಮತ್ತು ಈ ಹಾಡು ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಹಾಡನ್ನು ತೆಗೆದುಹಾಕದಿದ್ದರೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ಸಚಿವ ಮಿಶ್ರಾ ಹೇಳಿದ್ದಾರೆ.

ಈಗ ವಿವಾದಕ್ಕೀಡಾಗಿರುವ ಹಾಡು 1960ರಲ್ಲಿ ಬಿಡುಗಡೆಯಾದ ಹಿಂದಿಯ ‘ಕೋಹಿನೂರ್​’ ಸಿನಿಮಾದ ಹಾಡಾಗಿದೆ. ಈ ಹಾಡನ್ನು​ ಮಹಮ್ಮದ್​​ ರಫಿ ಹಾಡಿದ್ದಾರೆ. ಸದ್ಯಕ್ಕೆ ಇದನ್ನು ರಿಮಿಕ್ಸ್​ ಮಾಡಿ ಆಲ್ಬಮ್​ ಸಾಂಗ್​​ ತಯಾರಿಸಿ ಬಿಡುಗಡೆ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಬೆಂಗಳೂರು: ಬೆಂಗಳೂರು...

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...