ಸರಕಾರಿ ಶಾಲೆಯ ಗೋಡೆ ಮೇಲೆ ದೇಶದ್ರೋಹಿಗಳಿಂದ ಪಾಕ್ ಪರ ಘೋಷಣೆ!

Date:

ಹುಬ್ಬಳ್ಳಿಯ ಪ್ರತಿಷ್ಠಿತ ಕೆ ಎಲ್ ಇ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಲ್ಲಿ ಇಬ್ಬರು ಯುವತಿಯರು ಪಾಕ್​ಗೆ ಜೈ ಕಾರ ಕೂಗಿದರು. ಈ ಮೂರು ಪ್ರಕರಣಗಳು ಮರೆಯುವ ಮುನ್ನವೇ ಇದೀಗ ಮತ್ತೆ ಹುಬ್ಬಳ್ಳಿಯಲ್ಲಿ ಇಂತಹದ್ದೇ ದೇಶದ್ರೋಹದ ಘೋಷಣೆ ಕಂಡು ಬಂದಿದೆ.
ಹುಬ್ಬಳ್ಳಿಯ ಸರಕಾರಿ ಶಾಲೆಯ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ಬುಡರಶಿಂಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲೆ ದುಷ್ಕರ್ಮಿಗಳು ಪಾಕಿಸ್ತಾನ ಪರ ಘೋಷಣೆ ಬರೆದಿದ್ದು, ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಿದೆ. ಮಾಹಿತಿ ನೀಡದರೂ ಸ್ಥಳಕ್ಕೆ ಆಗಮಿಸಿದ ಪೊಲೀಸರ ನಡೆಗೆ ಎಲ್ಲಾ ಕಡೆಗಳಲ್ಲಿ ಖಂಡನೆ ವ್ಯಕ್ತವಾಗಿದೆ.
ಹುಬ್ಬಳ್ಳಿಯ ಕೆ ಎಲ್ ಇ ಕಾಲೇಜಿನ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ಬೆಂಗಳೂರಲ್ಲಿ ನಡೆದ ಸಿ ಎ ಎ ವಿರುದ್ಧದ ಪ್ರತಿಭಟನೆ ವೇಳೆ ಅಮೂಲ್ಯ ಎಂಬ ವಿದ್ಯಾರ್ಥಿನಿ ಪಾಕ್ ಜಿಂದಾಬಾದ್ ಎಂದಿದ್ದಳು. ಮರುದಿನ ಆರ್ದ್ರಾ ಎಂಬಾಕೆ ಕೂಡ ಇಂತಹದ್ದೆ ದೇಶದ್ರೋಹದ ಹೇಳಿಕೆ ನೀಡಿದ್ದಳು.

Share post:

Subscribe

spot_imgspot_img

Popular

More like this
Related

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಹತ್ಯೆ!

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ ಬೆಂಗಳೂರು,...

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...