ಬೆಂಗಳೂರು: ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷರು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ಅದರ ನಿರ್ಧಾರದಂತೆ ಮುಂದಕ್ಕೆ ಹೋಗೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಎಂದರು.
ಇನ್ನೂ ಇದನ್ನು ಎರಡು ಸದನದ ಮುಂದೆ ಮಂಡಿಸಬೇಕೋ? ಅಥವಾ ಸರ್ಕಾರ ಘೋಷಣೆ ಮಾಡಬೇಕೋ ಎಂಬ ಬಗ್ಗೆ ಕ್ಯಾಬಿನೆಟ್ ನಿರ್ಧಾರ ಕೈಗೊಳ್ಳಲಿದೆ. ಕ್ಯಾಬಿನೆಟ್ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು. ವರದಿ ಏನು ಶಿಫಾರಸುಗಳನ್ನು ನೀಡಿದೆ ಹಾಗೂ ವರದಿಯಲ್ಲಿ ಏನೆಲ್ಲಾ ದತ್ತಾಂಶಗಳ ಇವೆ ಎಂಬುವುದು ಬಹಿರಂಗವಾಗದೆ ನಾವು ಏನೂ ಹೇಳಲು ಸಾಧ್ಯವಿಲ್ಲ. ಇವಾಗ ಏನೇ ಚರ್ಚೆಗಳು ನಡೆದರೂ ಅವು ಕೇವಲ ಊಹೆಗಳು ಮಾತ್ರ ಎಂದರು.
ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ವಿಚಾರ: ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು..?
Date: