ಮಡಿಕೇರಿ : ಎಂಥೆಂಥಾ ಕಳ್ಳರು ಇರ್ತಾರೆ ನೋಡಿ… ಭಕ್ತಿ ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು ಇಲ್ಲೊಂದು ಗ್ಯಾಂಗ್ ಕಳ್ಳತನಕ್ಕೆ ಇಳಿದಿದ್ದು. ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಖತರ್ನಾಕ್ ಕಳ್ಳರ ಗ್ಯಾಂಗ್ ಕಂಡು ಬಂದಿದ್ದು ಬೇರೆ ಎಲ್ಲೂ ಅಲ್ಲ.. ನಮ್ಮ ಕೊಡಗಿನ ಮಡಿಕೇರಿಯಲ್ಲಿ.
ನಾಗಾ ಸಾಧುಗಳ ವೇಷ ಧರಿಸಿ ಹಣ, ಮೊಬೈಲ್ ದೋಚುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪೆÇಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಮತ್ತು ಉಮೇಶ್ ನಾಥ್ ಬಂಧಿತರು. ಇವರು ಜಿಲ್ಲೆಯ ವಿವಿಧ ಕಡೆ ತಮ್ಮ ಕೈಚಳಕ ತೋರಿದ್ದರು. ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ಮೊಬೈಲುಗಳನ್ನು ಎಗರಿಸಿದ್ದರು. ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ನವೆಂಬರ್ 24ರಂದು ಕೆಂಪು ಪುಡಿ ನೀಡಿ, ತಾವು ಹೇಳಿದ ಜಾಗಕ್ಕೆ ಬರುವಂತೆ ಮಾಡಿ 25 ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದೂವರೆ ಸಾವಿರ ರೂ ನಗದು ಕಿತ್ತು ಪರಾರಿಯಾಗಿದ್ದರು.
ಹದಿನೈದು ದಿನಗಳ ನಾಗೇಶ್ ಎಂಬುವವರಿಗೂ ಇದೇ ರೀತಿ ಮಂಕುಬೂದಿ ಎರಚಿ ಯಾಮಾರಿಸಿದ್ದರು. ಆರೋಪಿಗಳಿಗೆ ಶೋಧಕಾರ್ಯ ನಡೆಸಿದ್ದ ಕುಶಾಲನಗರ ಸಿಪಿಐ ಕುಮಾರ್ ಆರಾಧ್ಯ ಅವರ ನೇತೃತ್ವದ ತಂಡ ಸೋಮವಾರ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಮತ್ತು ರಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
ಸಾಧುಗಳ ವೇಷ ಧರಿಸಿ ಕಳ್ಳತನ ಮಾಡುತ್ತಿದ್ರು ಈ ಮಹಾಕಳ್ಳರು!
Date: