ಸಾರ್ಜನೀಕರೇ ಗಮನಿಸಿ.. ಇನ್ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಸೌಲಭ್ಯ !
ಬೆಂಗಳೂರು: ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಲು ಆಸ್ತಿ ಖರೀದಿದಾರರನ್ನು ದುಷ್ಕೃತ್ಯಗಳಿಂದ ರಕ್ಷಿಸುವ ಪ್ರಮುಖ ಉದ್ದೇಶದಿಂದ ಹೊಸ ಕಾರ್ಯತಂತ್ರವೊಂದನ್ನು ಜಾರಿಗೆ ತರಲಾಗಿದೆ. ಹೌದು ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಸೇವೆಗಳು ದೊರಕುವಂತೆ ಮಾಡಲಿದೆ.
ಈ ಬಗ್ಗೆ ಬಿಬಿಎಂಪಿ ಮಾಧ್ಯಮ ಮಾಹಿತಿ ನೀಡಿದ್ದು, ” ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾ ವನ್ನು ಪಡೆಯಲು ಬೆಂಗಳೂರು ಒನ್ ಕೇಂದ್ರದ ಮೂಲಕ ಸಹಾಯವನ್ನು ಪಡೆಯಬಹುದು ” ಎಂದು ತಿಳಿಸಿದೆ.ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಈ ಪ್ಲಾನ್ ಮಾಡಿರುವ ಬಿಬಿಎಂಪಿ, ಇದೀಗ ಜನರು ತಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಶೀಘ್ರವಾಗಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ.
ಇ-ಖಾತಾ ಪಡೆಯಲು ಶುಲ್ಕ ಎಷ್ಟು?
ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು.ಬಿಬಿಎಂಪಿಗೆ 125 ರೂ.(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು
ಇ ಖಾತಾ ಪಡೆಯುವುದು ಹೇಗೆ?
ನಾಗರೀಕರು ಇ-ಖಾತಾವನ್ನು ಹೇಗೆ ಪಡೆಯಬೇಕು ಎಂಬ ವಿಡಿಯೋ ಬಿಡುಗಡೆ ಮಾಡಿರುವ ಪಾಲಿಕೆ, ಈ ವಿಡಿಯೋ ನೋಡಿಕೊಂಡು ಸುಲಭವಾಗಿ ಅಪ್ ಲೋಡ್ ಮಾಡುವುದಕ್ಕೆ ನೆರವಾಗಲು ಹೊರಟಿದೆ. ಸದ್ಯ ಪಾಲಿಕೆಯ ಯೂಟ್ಯೂಬ್ ಚಾನೆಲ್ನಲ್ಲಿ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ಮೂಲಕ ಇ-ಖಾತಾ ಬಗ್ಗೆ ಜನರಿಗಿರುವ ಗೊಂದಲಗಳನ್ನು ನಿವಾರಿಸಲು ಪಾಲಿಕೆ ಮುಂದಾಗಿದೆ.