ಬೆಂಗಳೂರು:- ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬ, ವಾರಾಂತ್ಯದ ರಜೆ ಇರುವ ಹಿನ್ನೆಲೆ, ಜನ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನಲೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ 250 ಬಸ್ ಕಾರ್ಯಾಚರಣೆ ನಡೆಸುತ್ತಿದೆ.
ಇನ್ನು ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ 450 ಬಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು, ರಾಜ್ಯದ ಒಳಗಡೆ ಹೆಚ್ಚುವರಿಯಾಗಿ 450 ಹಾಗೂ ಅಂತರರಾಜ್ಯಕ್ಕೆ 60 ಬಸ್ಗಳನ್ನು ನಿಯೋಜನೆ ಮಾಡಲಾಗಿದೆ, ಈ ಹಿನ್ನಲೆ ಮುಗಂಡವಾಗಿ 150 ಬಸ್‌ಗಳನ್ನ ಪ್ರಯಾಣಿಕರು ಬುಕ್ ಮಾಡಿದ್ದಾರೆ. ಜೊತೆಗೆ ದೈನಂದಿನ ಕಾರ್ಯಚರಣೆಯಲ್ಲಿ ಅಡಚಣೆಯಾಗದಂತೆ ಪ್ರಯಾಣಿಕರಿಗೆ ಅನುಕೂಲವಾಗಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಇನ್ನು ಮಹಾನಗರದ ಜಯನಗರ, ವಿಜಯನಗರ ಹಾಗೂ ಸ್ಯಾಟಲೈಟ್ ಬಸ್ ಟರ್ಮಿನಲ್ನಲ್ಲಿ ಕೂಡ ಹೆಚ್ಚುವರಿ ಬಸ್ ಆಪರೇಟಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾತ್ರಿ 11 ಗಂಟೆ ನಂತರ ಪ್ರಯಾಣಿಕರ ಹೆಚ್ಚಳ ಹಿನ್ನಲೆ ರಾತ್ರಿಯಿಡಿ ನಿಗಾವಹಿಸಲು ಕೆಎಸ್ಆರ್ಟಿಸಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಸಿಟಿ ಬಿಟ್ಟು ಜನ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳಸಿದ್ದು, ಮಹಾಲಕ್ಷ್ಮಿ ಮೇಟ್ರೋ ನಿಲ್ದಾಣದಿಂದ ಯಶವಂತಪುರ, ಗೊರಗುಂಟೆ ಪಾಳ್ಯದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನು ಯಶವಂತಪುರ ಗೋವರ್ದನ ಚಿತ್ರಮಂದಿರದ ಬಳಿ ಬಸ್‌ಗಾಗಿ ಜನ ಕಾಯುತ್ತಿದ್ದಾರೆ. ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾಗಿ, ಜನರು ಪರದಾಟ ನಡೆಸಿದ್ದಾರೆ.