ಸಾವು-ಬದುಕಿನ ನಡುವೆ ‘ಈಜುತ್ತಿದ್ದ’ ನಾಯಿಯನ್ನು ರಕ್ಷಿಸಿದ ಯುವಕರು..!

admin
By admin
1 Min Read

ಅದೊಂದು ಪುಟ್ಟನಾಯಿ. ಅದು ಸಾವು-ಬದುಕಿನ ನಡುವೆ ಈಜುತ್ತಿತ್ತು…ಅದೂ ಬರೋಬ್ಬರಿ 220 ಕಿಮೀ ದೂರದಲ್ಲಿ..! ಅದು ಹೇಗೋ ಅದೃಷ್ಟವಶಾತ್​ ದೂರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕಣ್ಣಿಗೆ ಬಿದ್ದಿದೆ..! ಅದನ್ನು ಕಂಡ ಕಾರ್ಮಿಕರು ತಡ ಮಾಡದೇ ಅದರ ರಕ್ಷಣೆಗೆ ಮುಂದಾಗಿದ್ದಾರೆ..!
ಈ ಘಟನೆ ನಡೆದಿರುವುದು ನಮ್ಮಲ್ಲಿ ಅಲ್ಲ. ಬದಲಾಗಿ ದೂರದ ಥೈಲ್ಯಾಂಡ್​ನಲ್ಲಿ. ಅಲ್ಲಿ ಸಮುದ್ರದಲ್ಲಿ ಸುಮಾರು 220 ಕಿಮೀ ದೂರದಲ್ಲಿ ನಾಯಿಯೊಂದು ಈಜುತ್ತಿತ್ತು.. ಅದು ಸಮುದ್ರಕ್ಕೆ ಅಕಸ್ಮಾತ್ ಆಗಿ ಬಿದ್ದಿತೋ ಅಥವಾ ಕಿಡಿಗೇಡಿಗಳು ಅದನ್ನು ಎಸೆದರೋ ಗೊತ್ತಿಲ್ಲ. ಆದರೆ, ಅದು ತನ್ನ ಜೀವ ಉಳಿಸಿಕೊಳ್ಳಲು ಪರದಾಡಿ ಈಜುತ್ತಿತ್ತು. ದೂರದಲ್ಲಿ ಆಯಿಲ್​ ವರ್ಕಸ್​​​ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆ ನಾಯಿ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಆ ಕಾರ್ಮಿಕರು ಅದರ ರಕ್ಷಣೆಗೆ ಮುಂದಾಗಿದ್ದರು. ಅಲ್ಲಿಗೆ ಕೂಡಲೇ ತೆರಳಿ ಅದನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ವರದಿಯಾಗಿದ್ದು, ವೆಬ್​ಸೈಟ್​ಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಾಯಿಯ ರಕ್ಷಣೆ ಮಾಡಿದ ಕಾರ್ಮಿಕರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article