ಚುನಾವಣೆಗೆ ಕೆಲವೇ ದಿನ ಬಾಕಿ ಇದೆ. ಹೀಗಿರುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಅಲ್ಲದೆ ಪೊಲೀಸರು ಎಲ್ಲಾ ರೌಡಿ ಶೀಟರ್ ಗಳ ಪರೇಡ್ ನಡೆಸುತ್ತಿದ್ದು, ಕೆಲವು ರೌಡಿಶೀಟರ್ ಗಳನ್ನು ಗಡಿಪಾರು ಮಾಡಿದ್ದಾರೆ. ಈ ಮಧ್ಯೆಯೇ ರಾಜ್ಯದ ಮುಖ್ಯಮಂತ್ರಿಯವರ ಬೆಂಗಾವಲು ವಾಹನದಲ್ಲಿ ರೌಡಿ ಶೀಟರ್ ಕಾಣಿಸಿಕೊಂಡಿದ್ದಾನೆ.
ಹೌದು..ಸಿಎಂ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಕಿರುಗಾವಲು ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸುತ್ತಿರುವಾಗ ರೌಡಿ ಶೀಟರ್ ಪ್ರಕಾಶ್ ಸಿಎಂ ಬೆಂಗಾವಲು ಪಡೆಯ ವಾಹನದಲ್ಲಿ ಕುಳಿತಿದ್ದದ್ದು ಕಂಡು ಬಂದಿದೆ.
ಕಿರುಗಾವಲು ಪೊಲೀಸ್ ಠಾಣೆಯ ರೌಡಿಶೀಟರ್ ಲಿಸ್ಟ್ ನಲ್ಲಿ ಪ್ರಕಾಶ್ ಹೆಸರಿದೆ. ಹೀಗಿದ್ರೂ, ಸಿಎಂ ಬೆಂಗಾವಲು ಸಿಬ್ಬಂದಿ ಜೊತೆ ಪೊಲೀಸ್ ವಾಹನದಲ್ಲೇ ರೌಡಿಶೀಟರ್ ಪ್ರಕಾಶ್ ಓಡಾಡ್ತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.