ಮಾಧ್ಯಮದವರ ಮೇಲೆ ಯಾರಾದರೂ ಹಲ್ಲೆ ಮಾಡಿದರೆ ನಾವು ಹೊಣೆಯಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ ನಂತರ ಪಕ್ಷೇತರ ಆದ್ಯತೆ ಸುಮಲತಾ ಅಂಬರೀಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ
ಕೆ. ಆರ್ ಪೇಟೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು ಸಿಎಂ ಅವರ ಈ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ ದರ್ಶನ್, ಯಶ್, ಅಭಿಷೇಕ್ ಮತ್ತು ನಾನು ಪ್ರಚಾರ ಮಾಡುತ್ತಿರುತ್ತೇವೆ. ಕಲ್ಲು ತೂರುತ್ತಾರೆ ಎನ್ನುವ ಸಿಎಂ ಹೇಳಿಕೆಯಿಂದ ನಮಗೆ ಭಯವಾಗಿದೆ. ಇಲ್ಲಿ ಇರುವ ಪೊಲೀಸರ ಮೇಲೆ ನಂಬಿಕೆ ಇಲ್ಲ.
ಹಾಗಾಗಿ ಸಿಆರ್ ಪಿಎಫ್ ರಕ್ಷಣೆ ಒದಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸುಮಲತಾ ತಿಳಿಸಿದರು.