ಸಿದ್ದಗಂಗಾ ಶ್ರೀಗಳ ಚಿಕಿತ್ಸೆಯಲ್ಲಿ ‘ಧರ್ಮ‘ ಮಾತು.. ಡಿಕೆಶಿ ಮಾತಿಗೆ ತೀರ್ವ ವಿರೋಧ..
ಸಿದ್ದಗಂಗಾ ಶ್ರೀಗಳು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನಿಮಗೆಲ್ಲ ತಿಳಿದೆ ಇದೆ.. ಈ ನಡುವೆ ಚೆನ್ನೈಗೆ ತೆರಳಿ ಶ್ರೀಗಳ ಯೋಗಕ್ಷೇಮ ವಿಚಾರಿಸಿ ಬಂದಿದ್ರು ಡಿ.ಕೆ.ಶಿವಕುಮಾರ್.. ಸದ್ಯ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ.. ಚಿಕಿತ್ಸೆಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ.. ಯಾರೂ ಸಹ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ್ರು..
ಈಮಾತಿನನಡುವೆಮುಸ್ಲಿಂಆಡಳಿತವಿದ್ದರೂಶ್ರೀಗಳಿಗೆಉತ್ತಮಚಿಕಿತ್ಸೆನೀಡಲಾಗುತ್ತಿದೆ.. ಅಲ್ಪ ಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳಿಗೆ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿ ತೀವ್ರ ಟೀಕೆಗೆ ಗುರಿಯಾಗಿದೆ.. ಅಂದಹಾಗೆ ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ಡಾ.ಮೊಹಮ್ಮದ್ ರೆಲಾ ಅವರೇ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ..