ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಶಿವಾನಂದ ಸ್ವಾಮೀಜಿ ಭವಿಷ್ಯ
ಗದಗ: ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, ಇವತ್ತಿನ ರಾಜಕೀಯ ಚಿಂತನೆ ಮಾಡುವುದಾದರೆ ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ. ಅವರಿಗೆ ಸಾಮಾಜಿಕ, ಧಾರ್ಮಿಕ ಹಿನ್ನೆಲೆ ದೃಷ್ಟಿಯಿಂದ ಹೇಳಿದ್ದೇವೆ ಹೊರತು ಡಿಕೆಶಿ ಬಗ್ಗೆ, ವೀರಪ್ಪ ಮೊಯ್ಲಿ ಬಗ್ಗೆ ಒಳ್ಳೆ ಅಭಿಪ್ರಾಯವಿದ್ದು ನಮಗೆ ಅವರೂ ಬೇಕಾದವರು ಎಂದರು. ನಮ್ಮ ಭಾರತೀಯ ಪರಂಪರೆಯಲ್ಲಿ ಸಂಕ್ರಾಂತಿ ಭವಿಷ್ಯ ಹಾಗೂ ಯುಗಾದಿ ಭವಿಷ್ಯ ಅಂತಾರೆ. ಚಂದ್ರನನ್ನು ಆಧಾರವಾಗಿಟ್ಟುಕೊಂಡು ಯುಗಾದಿ ಮೇಲೆ ಮಳೆ, ಬೆಳೆ, ಧಾನ್ಯಗಳು, ರಾಜರ ಬದಲಾವಣೆ, ಯುದ್ಧ ಭೂಮಿ ಎಲ್ಲಾ ಹೇಳ್ತಾರೆ. ಆವಾಗ ಅದನ್ನು ನೋಡಿಕೊಳ್ಳಬೇಕು ಅಂತಾ ನಾನು ಹೇಳಿದ್ದೇನೆ. ಒಕ್ಕಲಿಗರು ಅಂದರೆ ಅನ್ನದಾತರು ಎಂದರ್ಥ ಅವರನ್ನ ಜಗತ್ತೇ ಮರೆಯೋದಿಲ್ಲ. ಇದಕ್ಕೆ ಜಾತಿ ಲೇಪನ ಹಚ್ಚೋದು ಬೇಡ ಒಕ್ಕಲಿಗ ಸಮಾಜಕ್ಕೆ ಜಗತ್ತೇ ಬಾಗಬೇಕು ಎದು ಹೇಳಿದರು.