ಸಿನಿಮಾ ನಟರು ಪ್ರಚಾರ ಮಾಡುವ ಬಗ್ಗೆ ವಿರೋಧ ವ್ಯಕ್ತಪಡಿಸುವವರಿಗೆ ನಟಿ, ಎಂಎಲ್ಸಿ ತಾರಾ ಟಾಂಗ್ ನೀಡಿದ್ದಾರೆ. ಸಿನಿಮಾದವರು ಮುಖ್ಯಮಂತ್ರಿಗಳಾಗಿದ್ದಾರೆ.. ಅಮೆರಿಕಾ ಅಧ್ಯಕ್ಷರೂ ಆಗಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದ್ದಾರೆ.
ಮಂಗಳೂರು ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಬಿಜೆಪಿ ಪರ ಪ್ರಚಾರ ಅವರು ಬಿಜೆಪಿ ಕಾರ್ಯಕರ್ತರ ಜೊತೆ ಮೀನು ಮಾರುವ ಮಹಿಳೆಯರಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ನಂತರ ಪತ್ರಕರ್ತರ ಜೊತೆ ಮಾತಾಡಿದ ತಾರಾ, ಸಿನಿಮಾ ನಟರೇನು ಬೇರೆ ಗ್ರಹದಿಂದ ಬಂದವರಲ್ಲ. ಚಿತ್ರ ಕಲಾವಿದರೂ ಇದೇ ಸಮಾಜದಿಂದ ಬೆಳೆದು ಬಂದವರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕೂಡ ಸಿನಿಮಾ ರಂಗದಿಂದಲೇ ಬಂದವರು. ಕುಮಾರಸ್ವಾಮಿ ತಮ್ಮ ಜೀವನ ಪ್ರಾರಂಭಿಸಿದ್ದಯ ಚಿತ್ರರಂಗದಿಂದಲೇ ಅಲ್ಲವೇ ಎಂದರು, ಸಿನಿಮಾದವರು ಸಿಎಂ ಆಗಿದ್ದಾರೆ, ಅಮೆರಿಕಾ ಅಧ್ಯಕ್ಷರು ಆಗಿದ್ದಾರೆ ಎಂದು ಹೇಳಿದರು.
ಸಿನಿಮಾದವರು ಸಿಎಂ ಆಗಿದ್ದಾರೆ, ಅಮೆರಿಕಾ ಅಧ್ಯಕ್ಷರು ಆಗಿದ್ದಾರೆ ಎಂದ ತಾರಾ
Date: