ಬೆಂಗಳೂರು: ವರ್ಷದ ಮೊದಲ ಹಬ್ಬ ಅಂದ್ರೆ ಅದು ಮಕರ ಸಂಕ್ರಾಂತಿ. ಹೀಗಾಗಿ ಈ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಣೆ ಮಾಡಲು ಬೆಂಗಳೂರಿನ ಜನರು ಸಜ್ಜಾಗ್ತಿದ್ದಾರೆ. ಹೌದು ಯಲಹಂಕದ ಕೊಡಿಗೆಹಳ್ಳಿಯಲ್ಲಿ ಶಾಸಕ ಕೃಷ್ಣೆ ಭೈರೇಗೌಡ ಮತ್ತೆ ಧರ್ಮಪತ್ನಿ ಮಿನಾಕ್ಷಿ ನೇತೃತ್ವದಲ್ಲಿ ಸುಗ್ಗಿ ಹುಗ್ಗಿ ಹಬ್ಬ ಆಯೋಜಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಹಳ್ಳಿಯ ವಾತಾವರಣ ನಿರ್ಮಾಣಗೊಂಡಿದ್ದು, ಹಳ್ಳಿಯ ಸೊಗಡಿನ ಆಟ.. ಎತ್ತುಗಳ ನೋಟ ಕಣ್ಮನಸೆಳೆಯುತ್ತಿದೆ.
ಅದರಲ್ಲೂ ಪುಟ್ಟ ಬಾಲಕರು ಮಣ್ಣಿನ ಮಡಿಕೆ ಮಾಡುವ ಸಂಭ್ರಮದಲ್ಲಿ ತೊಡಗಿರುವುದನ್ನು ಕಾಣಬಹುದಾಗಿತ್ತು. ಒಲೆಯಲ್ಲಿ ಪೊಂಗಲ್ ಸೇರಿದಂತೆ ಹಳ್ಳಿಯ ಸೊಗಡನ್ನು ಬಿಂಬಿಸಲಾಗಿತ್ತು. ಸೀರೆಯುಟ್ಟ ನಾರಿಯರ ಸಂಭ್ರಮದ ಜೊತೆ ಡೊಳ್ಳು ಕುಣಿತದಿಂದ ಸಂಭ್ರಮಿಸಲಾಯ್ತು.