ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ: ಲಕ್ಷ್ಮಿ ಹೆಬ್ಬಾಳ್ಕರ್

tnit editors
1 Min Read

ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ. ಬೆಳಗಾವಿಯಲ್ಲಿಂದು ಸಚಿವೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಒಬ್ಬ ತಾಯಿ ಇದ್ದೀನಿ, ಅಕ್ಕ ಇದ್ದೀನಿ. ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ನಾನು ಯಾರಿಗೂ ಕಾಟ ಕೊಟ್ಟಿಲ್ಲ. ಆದ್ರೆ ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ.
ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರ ಆದ್ರು. ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನೀವು ಆಕ್ಸಿಡೆಂಟ್ ಮಾಡಿ ಮೂವರ ಕೊಲೆಗಾರ ಎಂದಿದ್ದೆ. ಅದಕ್ಕೆ ಆ ರೀತಿ ಮಾತನಾಡಿದ್ದಾರೆ. ಸದನದಲ್ಲಿ ನ್ಯಾಯ ಸಿಗದ ಬಗ್ಗೆ ನಾನು ಏನೂ ಹೇಳಲ್ಲ. ನನ್ನ ಸೊಸೆ ನನ್ನ ಮಗ ನನಗೆ ಧೈರ್ಯ ತುಂಬಿದ್ದರೆಂದು ತಿಳಿಸಿದ್ದಾರೆ.

Share This Article