No menu items!
24.7 C
Munich
Saturday, May 2, 2026

ಸಿಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ: ಡಿಕೆ ಶಿವಕುಮಾರ್

Must read

ಸಿಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ: ಡಿಕೆ ಶಿವಕುಮಾರ್

ಬೆಳಗಾವಿ: ಸಿಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ವಿಧಾನ ಪರಿಷತ್ ಕಲಾಪದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಮಿತ್ ಶಾ ಹೇಳಿಕೆಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸದನದಲ್ಲಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ನಾಯಕ ಎಂದು ಕೂಗಿದ್ರು. ಪರಿಷತ್ನಲ್ಲಿದ್ದ ನಮ್ಮ ಸದಸ್ಯರ ಬಳಿ ಮಾಹಿತಿ ಪಡೆದೆ, ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು.
ಇದಕ್ಕೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಕಾರು ಅಪಘಾತ ಪ್ರಕರಣ ಪ್ರಸ್ತಾಪಿಸಿ ಕೊಲೆಗಡುಕ ಎಂದಿದ್ದಾರೆ. ಕೊಲೆಗಡುಕ ಎಂದಿದ್ದಕ್ಕೆ ಆ ರೀತಿ ನಿಂದಿಸಿದ್ದು ಸರಿನಾ..? ಸಂಸ್ಕೃತಿ ಹೊಂದಿರುವ ಪಕ್ಷ, ನಾಲಗೆಯಲ್ಲಿ ಆಚಾರ, ವಿಚಾರ ಎಲ್ಲಿದೆ? ಪೊಲೀಸರು ಕಾನೂನು ಕ್ರಮ ಏನಾಗಬೇಕೋ ಅದಾಗುತ್ತೆ ಎಂದು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article