ಬೆಂಗಳೂರು: ಡಾ ಕೆ ಸುಧಾಕರ್ ನನಗೆ ಕಾಲ್ ಮಾಡಿದ್ದಾರೆ ಅಂತ ಅದರಲ್ಲಿ ಸಾಬೀತಾದರೆ, ಯಲಹಂಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದರು. ನಗರದಲ್ಲಿಂದು ವಿಶ್ವನಾಥ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ವಿಶ್ವನಾಥ್ ರನ್ನು ತಾನು ಭೇಟಿಯಾಗಲು ಅವರ ಮನೆಗೆ ಹೋಗುತ್ತೇನೆ ಅಂತ ಕರೆ ಮಾಡಿದಾಗ್ಯೂ ಅವರಿಂದ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಸುಧಾಕರ್ ಹೇಳಿದ್ದಾರೆಂಬ ವಿಷಯಕ್ಕೆ ಪ್ರತಿಕ್ರಿಯೇ ನೀಡಿದ್ದಾರೆ.
ತನಗೆ ಕಾಲ್ ಮಾಡಿದ್ದಾರೆ ಅಂತ ಅದರಲ್ಲಿ ಸಾಬೀತಾದರೆ, ಯಲಹಂಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. ಸುಧಾಕರ್ ಅವರು ಈ ಬಗೆಯ ಗಿಮಿಕ್ ಮಾಡಿ ಜನರ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದು ಹೇಳಿದ ವಿಶ್ವನಾಥ್, ಸುಧಾಕರ್ ಕಳೆದ 5-6 ದಿನಗಳಲ್ಲಿ ಒಂದು ಮೆಸೇಜ್ ಕಳಿಸಿದ್ದು ಬಿಟ್ರೆ ಅವರ ಮತ್ತು ತನ್ನ ನಡುವೆ ಯಾವುದೇ ಕಮ್ಯುನಿಕೇಶನ್ ನಡೆದಿಲ್ಲ ಎಂದರು
ಸುಧಾಕರ್ ನನಗೆ ಕಾಲ್ ಮಾಡಿದ್ದಾರೆಂದು ಸಾಬೀತಾದರೆ ರಾಜೀನಾಮೆ ಕೊಡ್ತೀನಿ !
Date:






