ಸುಧಾ ಚಂದ್ರನ್ .. ಹೆಸರು ಹೇಳಿದ ತಕ್ಷಣ ನೆನಪಾಗುವುದು ನೃತ್ಯ ಲೋಕ. ಇವರದು ಭಾರತೀಯ ನೃತ್ಯಲೋಕದಲ್ಲಿ ದೊಡ್ಡ ಹೆಸರು. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದವರು. ನೃತ್ಯದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಈಗ ಗೊಂದಲದಲ್ಲಿರುವವರಿಗೆ ತಮ್ಮ ಅನುಭವದ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ.
ಸುಧಾ ಚಂದ್ರನ್ ಅವರು 1981ರಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಆದರೆ, ಕಾಲಿಲ್ಲವೆಂದು ದೃತಿಗೆಡೆದೆ ಮರದ ಕಾಲುಗಳಲ್ಲೇ ಮತ್ತೆ ನೃತ್ಯ ಮಾಡಲು ಮನಸು ಮಾಡುತ್ತಾರೆ. ಮತ್ತೆ 20 ವರುಷದ ನಂತರ ತಮ್ಮ ಡ್ಯಾನ್ಸಿಂಗ್ ಕರಿಯರ್ ಆರಂಭಿಸುತ್ತಾರೆ. ಗುರುಗಳಾದ ಚಿತ್ರಾ ವಿಶ್ವೇಶರನ್ ಅವರ ಮಾರ್ಗದರ್ಶನ ಪಡೆಯುತ್ತಾರೆ.
ಸುಧಾ ಚಂದ್ರನ್, ಕಾಲು ಕಳೆದುಕೊಂಡ ನಂತರ, 1987ರಲ್ಲಿ ಮೊದಲ ಭರತನಾಟ್ಯ ಪ್ರದರ್ಶನ ನೀಡುತ್ತಾರೆ. ಇದಿಷ್ಟೇ ಅಲ್ಲದೇ ದೂರದರ್ಶನದಲ್ಲಿ ಆಡಿಷನ್ ಇಲ್ಲದೇ ನೃತ್ಯ ಪ್ರದರ್ಶನ ನೀಡಿದ ಮೊದಲ ಆನಿವಾಸಿ ಭಾರತೀಯ ನೃತ್ಯಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗುತ್ತಾರೆ.
ಸುಧಾ ಚಂದ್ರನ್ ಅವರ ಶ್ರದ್ಧೆ ಪರಿಶ್ರಮದ ಫಲವಾಗಿ ಸಿನಿಮಾ ನಿರ್ದೇಶಕರು, ನೃತ್ಯ ಆಯೋಜಕರು ಸಾಕಷ್ಟು ಅವಕಾಶಗಳನ್ನು ನೀಡುತ್ತಾರೆ. ಇದೇ ಸ್ಪೂರ್ತಿಯಿಂದಲೇ ಮಸ್ಕತ್ನಲ್ಲಿ ಶಿವಶಕ್ತಿ ನೃತ್ಯ ಶಾಲೆಯನ್ನು ಸ್ಥಾಪಿಸಿ ನೂರಾರು ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಸುಧಾ ಚಂದ್ರನ್, ನೃತ್ಯ ಕೇವಲ ಮನರಂಜನೆಯಲ್ಲ ಅದು ಶಾಂತಿ, ಸೌಹಾರ್ದತೆ, ನೆಮ್ಮದಿಗೆ ರಾಯಾಭಾರಿ ಎನ್ನುತ್ತಾರೆ. ಪತಿ ವೈಕುಂಠ ಅವರ ಪ್ರೋತ್ಸಾಹದಿಂದ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಅಲ್ಲದೇ ಸ್ಪಿರಿಚ್ಯುಯಾಲಟಿ ಇನ್ ಡ್ಯಾನ್ಸ್ ಎನ್ನುವ ಪುಸ್ತಕವನ್ನು ಬರೆದರು.
ನೋಡಿ 20 ವರ್ಷಗಳ ನಂತರ ಮತ್ತೆ ನೃತ್ಯವನ್ನು ಆರಂಭಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಡೆಡಿಕೇಷನ್ ಎಲ್ಲವನ್ನು ಸಾಧ್ಯವಾಗಿಸಿತ್ತು. ಮಹಾರಾಷ್ಟ್ರದ ಗವರ್ನರ್ ಇವರನ್ನು ಆಹ್ವಾನಿಸಿ ಅಭಿನಯ ಸರಸ್ವತಿ ಅನ್ನೋ ಬಿರುದನ್ನು ಕೂಡ ನೀಡಿದ್ದಾರೆ. ಯುಎಸ್ಎ ಕಲಾವಿಧೂಷಿ ಬಿರುದನ್ನು ನೀಡಿದೆ.
ಸುಧಾ ಚಂದ್ರನ್ ಅವರು ತಮ್ಮ ಪತಿ ವೈಕುಂಠ ಅವರ ಸಹಾಯದಿಂದ ತಮ್ಮದೇ ಆದ ಬ್ಯಾಲೆ ಡ್ಯಾನ್ಸ್ ಫಾರ್ಮ್, ಕಾಸ್ಮಿಕ್ ಎನರ್ಜಿ, ಗಂಗೆಯ ಬಗ್ಗೆ ಸೇರಿದಂತೆ ಲೆಕ್ಕವಿಲ್ಲದಷ್ಟು ನೃತ್ಯ ಪ್ರದರ್ಶನ ನೀಡಿದ್ದಾರೆ. ಡಾ.ಬಾಲಮುರುಳಿ ಕೃಷ್ಣರಿಂದ ಬೆಸ್ಟ್ ಡಾನ್ಸ್ ಟೀಚರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
ಈಗ ಸುಧಾ ಚಂದ್ರನ್ ಅವರು ತಮ್ಮದೇ ಆದ ಕೌನ್ಸಿಲಿಂಗ್ ವೆಬ್ ಒಂದನ್ನು ಆರಂಭಿಸಿದ್ದಾರೆ. ನೃತ್ಯದಿಂದ ತಾವು ಇಷ್ಟು ವರ್ಷದಿಂದ ಪಡೆದುಕೊಂಡ ಸಾತ್ವಿಕ ಶಕ್ತಿ ಮತ್ತು ಕಾಸ್ಮಿಕ್ ಪವರ್ನಿಂದ ತಮ್ಮ ಮಾತಿನ ಮೂಲಕ ನೊಂದವರಿಗೆ ಆನ್ಲೈನ್ ಮೂಲಕ ಕೌನ್ಸಿಲಿಂಗ್ ಮಾಡುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ರೀತಿ, ವಿಚ್ಚೇದನವನ್ನು ನಿಲ್ಲಿಸುವುದು ಹೇಗೆ? ಸಂತೋಷವಾಗಿ ಬದುಕುವುದು ಹೇಗೆ ಸೇರಿದಂತೆ ಹಲವಾರು ವಿಡಿಯೋಗಳನ್ನು ಮಾಡಿದ್ದಾರೆ.
ಅಷ್ಟೇ ಏಕೆ, ಸುಧಾ ಚಂದ್ರನ್ ಅವರು ಲೈಫ್ಸ್ಟೈಲ್ ಮತ್ತು ರಿಲೇಷನ್ಶಿಪ್ ಬಗ್ಗೆಯೂ ಸಾಕಷ್ಟು ಲೇಖನಗಳನ್ನು ಸಹ ಬರೆದಿದ್ದಾರೆ. ಇವರ ವಿಡಿಯೋದಿಂದ ಪ್ರಯೋಜನ ಪಡೆದುಕೊಂಡವರು ಬಹಳ ಜನರಿದ್ದಾರೆ. ಆ ಮೂಲಕ ಎಲ್ಲಾ ನೊಂದ ಮನಸಿಗೆ ಧ್ವನಿಯಾಗುತ್ತಿದ್ದಾರೆ ಕೂಡ. ಸುಧಾ ಚಂದ್ರನ್, ನೃತ್ಯದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಇದೀಗ ಗೊಂದಲದಲ್ಲಿರುವವರಿಗೆ ತಮ್ಮ ಅನುಭವದ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಮತ್ತೊಂದು ಆದರ್ಶ. .