ಮಂಡ್ಯ ಲೋಕಸಭಾ ಚುನಾವಣೆ ಕಣ ರಂಗೇರಿದೆ. ದೋಸ್ತಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಸ್ಪರ್ಧಿಸುತ್ತಿದ್ದಾರೆ. ನಿಖಿಲ್ಗೆ ಪ್ರಬಲ ಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ.
ಸುಮಲತಾ ಅವರಿಗೆ ಮಂಡ್ಯ ‘ಕುರುಕ್ಷೇತ್ರ’ದಲ್ಲಿ ‘ಸಾರಥಿ’ಯಾಗಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿದ್ದರಾಗಿದ್ದಾರೆ. ಸುಮಲತಾ ಅಂಬರೀಶ್ ಅವರು ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ. ಅಪ್ಪಾಜಿ ಅವರು, ಅಂದರೆ ಅಂಬರೀಶ್ ಅವರು ಕರೆದಾಗಲು ಹೋಗುತ್ತಿದ್ದೆ, ಹೋಗಿದ್ದೆ. ಈಗಲೂ ಹೋಗುತ್ತೇನೆ. ಅವರ ಪರ ಪ್ರಚಾರಕ್ಕೆ ಹೋಗುವುದು ನನ್ನ ಕರ್ತವ್ಯ ಎಂದು ದರ್ಶನ್ ಹೇಳಿದ್ದಾರೆ.
ಸುಮಲತಾ ಅವರ ಪರ ದರ್ಶನ್ ಪ್ರಚಾರಕ್ಕೆ ಹೋಗಲು ರೆಡಿಯಾಗಿರುವುದು ಅವರಿಗೆ ‘ಗಜ’ಬಲ ಸಿಕ್ಕಂತಾಗಿದೆ. ದರ್ಶನ್ ಹಾಗೂ ಅವರ ಅಭಿಮಾನಿಗಳು ಚುನಾವಣಾ ಪ್ರಚಾರಕ್ಕೆ ಧುಮಿಕದರೆ ಸುಮಲತಾ ಅವರಿಗೆ ದೊಡ್ಡ ಶಕ್ತಿ ಸಿಕ್ಕಂತಾಗುತ್ತದೆ. ಒಂದು ಕಡೆ ತಮ್ಮ ವರ್ಚಸ್ಯು, ಇನ್ನೊಂದು ಕಡೆ ಅಂಬರೀಶ್ ಅವರ ವರ್ಚಸ್ಸು, ಮತ್ತೊಂದು ಕಡೆ ದರ್ಶನ್ ಅವರ ಬಲ ಸುಮಲತಾ ಅವರ ಗೆಲುವಿಗೆ ನೆರವಾಗಲಿದೆ.
ಸುಮಲತಾಗೆ ‘ಸಾರಥಿ’ಯಾದ ಚಾಲೆಂಜಿಂಗ್ ಸ್ಟಾರ್
Date: