ಸುಮಲತಾ ಅವರು ಬೇಕಾದರೆ Z ++ ಭದ್ರತೆ ತೆಗೆದುಕೊಳ್ಳಲಿ…!

admin
By admin
1 Min Read

ರಾಜ್ಯದ ಬಗ್ಗೆ ನರೇಂದ್ರ ಮೋದಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ 10, 20% ತಗೋತಾರೆ ಅನ್ನೋ ಮಾಹಿತಿ ಇದ್ರೆ ಜನರಿಗೆ ತಿಳಿಸಬಹುದು. ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ, ಅದನ್ನ ಮಾಡಬಹುದಲ್ವಾ? ರಾಜ್ಯ -ಕೇಂದ್ರ ಸರ್ಕಾರದ ಸಂಬಂಧದಲ್ಲಿ ಅದಕ್ಕೆ ಅವಕಾಶ ಇದೆ. ಅದನ್ನ ಬಿಟ್ಟು ರಾಜಕೀಯ ಕಾರಣಕ್ಕಾಗಿ ಈ ರೀತಿ ಹೇಳೋದು ಸರಿಯಲ್ಲ ಅಂತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ

ಸ್ವಾಭಾವಿಕವಾಗಿ ಪ್ರತಿಭಟನೆ ಮಾಡಲೇಬೇಕು ಎಂದರು.ಎಷ್ಟು ಜನ ಬಿಜೆಪಿಯವರ ಮೇಲೆ‌ ದಾಳಿಯಾಗಿದೆ? ಎಂದು ಪ್ರಶ್ನಿಸಿದ ಡಿಸಿಎಂ, ಕೇವಲ ಕಾಂಗ್ರೆಸ್- ಜೆಡಿಎಸ್‌ ಮುಖಂಡರು, ಬೆಂಬಲಿಗರ ಮೇಲೆ ದಾಳಿ ಮಾಡೋದು ಯಾಕೆ? ಹೀಗಾಗಿ ನಾವು ಪ್ರತಿಭಟನೆ ಮಾಡಿರೋದು ನಿಜ ಎಂದರು.

 ಸುಮಲತಾರಿಗೆ ಭಯ ಇದ್ರೆ ಭದ್ರತೆ ಪಡೆಯಲಿ. ಡಿಜಿಪಿಗೆ ತಿಳಿಸಿ ಭದ್ರತೆ ಪಡೆಯಲಿ. ಚುನಾವಣಾ ಆಯೋಗದ ಮೂಲಕ Z++ ಭದ್ರತೆ ತೆಗೆದುಕೊಳ್ಳಲಿ ಅಂತ ಡಿಸಿಎಂ ಹೇಳಿದ್ರು.

Share This Article