ಮಂಡ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ನಿಖಿಲ್ ಕುಮಾರ ಸ್ವಾಮಿ ಅವರ ವಿರುದ್ಧವಾಗಿ ಒಂದಿಷ್ಟು ಮಾತುಗಳು ಕೇಳಿಬರುತ್ತಿದ್ದರೂ…ಅವರ ಸ್ಪರ್ಧೆ ಖಚಿತ.
ಕಾಂಗ್ರೆಸ್ ನಿಂದ ಟಿಕೆಟ್ ಸಿಗದೇ ಇದ್ದರೂ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾದರೂ ಸರಿ ಎಂದು ಸ್ಪರ್ಧೆಯೊಡ್ಡಲು ರೆಡಿಯಾಗಿದ್ದಾರೆ.
ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಸುಮಲತಾ ಅವರ ಪರ ಪ್ರಚಾರಕ್ಕೆ ಸಿದ್ಧ ಎಂದಿದ್ದಾರೆ. ಅಪ್ಪಾಜಿಯವರು ಅಂದರೆ ಅಂಬರೀಶ್ ಅವರಿರುವಾಗಲೂ ನಾನು ಪ್ರಚಾರಕ್ಕೆ ಹೋಗುತ್ತಿದ್ದೆ. ಈಗಲೂ ಹೋಗ್ತೀನಿ.ಅದು ನನ್ನ ಕರ್ತವ್ಯ ಎಂದಿರುವ ದರ್ಶನ್ ಸುಮಲತಾಗೆ ಪ್ರಚಾರ ‘ಸಾರಥಿ’ಯಾಗಿ ‘ಗಜ’ ಬಲ ತುಂಬಿದ್ದಾರೆ.
ದರ್ಶನ್ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸಾಥ್ ನೀಡುತ್ತಾರಾ? ಅವರೂ ಪ್ರಚಾರಕ್ಕೆ ಧುಮುಕುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಇದಕ್ಕೀಗ ಅವರೇ ಉತ್ತರ ಕೊಟ್ಟಿದ್ದಾರೆ.
‘ಮಂಡ್ಯದಲ್ಲಿ ಅಂಬರೀಶ್ ಅವರ ಹೆಸರೇ ಒಂದು ಬಲ. ದರ್ಶನ್ ಸಾಥ್ ಕೂಡ ಇದೆ. ನನ್ನ ಬೆಂಬಲ ಸದ್ಯ ನನ್ನ ಚಿತ್ರಗಳಿಗೆ ಹಣ ಹೂಡಿದವರಿಗಾಗಿ’ ಎನ್ನುವ ಮೂಲಕ ಪ್ರಚಾರಕ್ಕೆ ಹೋಗಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ರಾಜಕೀಯದತ್ತ ನಂಗೆ ಒಲವು ಕಡಿಮೆ ಎಂದಿರುವ ಸುದೀಪ್ ಪ್ರಚಾರದಿಂದ ದೂರ ಉಳಿಯುವ ಸೂಚನೆ ನೀಡಿದ್ದಾರೆ. ‘ಗಜ’ಬಲ ಇರುವಾಗ ಪೈಲ್ವಾನ್ ಏಕೆ ಎಂದು ಸ್ವತಃ ಸುದೀಪೇ ಹೇಳಿಬಿಟ್ಟಿದ್ದಾರೆ.
ಸುಮಲತಾ ಪರ ಪ್ರಚಾರಕ್ಕೆ ‘ಗಜ’ ಬಲ ಸಿಕ್ತು, ‘ಪೈಲ್ವಾನ್’ ಅಖಾಡಕ್ಕೆ ಇಳಿತಾರಾ?
Date: