ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅಭಿಮಾನಿಗಳ ಮಹಿಳಾ ಸಂಘದ 56 ಸದಸ್ಯರು ಸುಮಾರು 450 ಕಿ.ಮೀ ದೂರದ ಬಿಜಾಪುರದಿಂದ ತಾಲೂಕಿಗೆ ಬಂದು ಸುಮಲತಾ ಪರವಾಗಿ ಚುನಾವಣಾ ಪ್ರಚಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯ ರಸ್ತೆಯಲ್ಲಿ ಗುಂಪಾಗಿ ಸಂಚಾರ ಮಾಡಿದ ಮಹಿಳೆಯರು ಸುಮಲತಾ ಅಮ್ಮನವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಶೃತಿ ಎಂಬುವವರು ಮಾತನಾಡಿ ನಾವುಗಳು ಅಂಬರೀಶ್ ಅಭಿಮಾನಿಗಳು ಈಗ ಸುಮಲತಾ ಅಂಬರೀಶ್ ಅವರು ಗೆಲ್ಲಬೇಕು ಎಂಬುದು ನಮ್ಮ ಬಯಕೆಯಾಗಿದೆ. ಇದಕ್ಕಾಗಿ ನಾವು ಮಹಿಳಾ ಸಂಘದಿಂದ ನಮ್ಮ ಹಣವನ್ನು ಹಾಕಿಕೊಂಡು ಒಂದು ಬಸ್‍ನಲ್ಲಿ 56 ಜನರು ಬಂದಿದ್ದೇವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ನಂತರ ಈಗ ಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.